ಇನ್ಸಪೆಕ್ಟರ್ ಜಗದೀಶ ಹಂಚಿನಾಳರಿಗೆ ಸಮಸ್ಯೆ…!!!

ಹುಬ್ಬಳ್ಳಿ: ನಗರದ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ಅವರಿಗೆ ಸಮಸ್ಯೆಯೊಂದು ಎದುರಾಗಿದ್ದು, ಅದನ್ನ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ಪೊಲೀಸ್ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ಅವರ ಫೇಸ್ಬುಕ್ ಮೆಸೆಂಜರ್ ಮೂಲಕ ಹಣವನ್ನ ಕೇಳುತ್ತಿದ್ದಾರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇಂತಹ ಕೃತ್ಯಗಳು ಹೆಚ್ಚಾಗುತ್ತಿದ್ದು, ಕಠಿಣ ಕ್ರಮ ಜರುಗಿಸುವ ಅವಶ್ಯಕತೆಯಿದೆ. ಇನ್ಸಪೆಕ್ಟರ್ ಹಂಚಿನಾಳ ಅವರ ಮೆಸೆಂಜರ್ ಮೂಲಕ ಹಣದ ಬೇಡಿಕೆ ಬಂದರೇ, ಹುಷಾಗಿರುವ ಅವಶ್ಯಕತೆ ಇದೆ.