Posts Slider

Karnataka Voice

Latest Kannada News

“ಆ” ಕೇಸಿಗೆ ಸಂಬಂಧಿಸಿದಂತೆ ವಿದ್ಯಾಗಿರಿಯ “ಹೊನ್ನಪ್ಪನವರ” ಅಮಾನತ್ತು….

1 min read
Spread the love

ಧಾರವಾಡ: ರಾಜಸ್ಥಾನದಲ್ಲಿ ನಡೆದ ಘಟನೆಯೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಗಾಗಿದ್ದ ಧಾರವಾಡ ವಿದ್ಯಾಗಿರಿ ಠಾಣೆಯ ಹೆಡ್‌ಕಾನ್ಸಟೇಬಲ್ ಮಹಾದೇವ ಹೊನ್ನಪ್ಪನವರ ಅಮಾನತ್ತು ಮಾಡಿ ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ.

ನವಲೂರಿನ ಅಪ್ರಾಪ್ತೆಯ ಬಗ್ಗೆ 2022ರಲ್ಲಿ ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿತ್ತು. (CR121/22) ಮನೆಯಿಂದ ಹೋದ ಮಗಳು ಮರಳಿ ಬಂದಿಲ್ಲವೆಂದು ಪೊಲೀಸರು ತನಿಖೆ ಶುರು ಮಾಡಿದಾಗ ಪ್ರಕರಣದಲ್ಲಿ 5 ಜನರನ್ನ ಬಂಧಿಸಲಾಗಿತ್ತು. ನಾಲ್ವರು ಇನ್ನೂ ಬೇಕಾಗಿದ್ದಾರೆ.

ತನಿಖೆಯಲ್ಲಿ ಕಂಡು ಬಂದ ಸತ್ಯಾಂಶದಂತೆ ಆ ಹುಡುಗಿಗೆ ಇಬ್ಬರು ಸ್ನೇಹಿತರು, ಆಕೆಯನ್ನ ಕಿತ್ತೂರಿನ ಒಂದು ಮನೆಯಲ್ಲಿದ್ದ ದಂಪತಿಗಳು, ಈ ಹುಡುಗಿಯ ಸ್ನೇಹಿತರ ಸಹಕಾರದಿಂದ “ರಾಜಸ್ಥಾನಕ್ಕೆ 3-6ಲಕ್ಷಕ್ಕೆ ಮಾರಾಟ ಮಾಡ್ತಾರೆ. ಅಲ್ಲಿಂದ ಶುರುವಾಗುವುದು ಅಸಲಿ ಕಥೆ.

ಆ ಸ್ಟೋರಿಯ ಭಾಗವಾಗಿದ್ದ ವಿದ್ಯಾಗಿರಿಯ ಹೆಡ್‌ಕಾನ್ಸಟೇಬಲ್ ಮಹಾದೇವ ಹೊನ್ನಪ್ಪನವರ ಅಮಾನತ್ತು ಆಗಿದ್ದಾರೆ. ಇವರ ಸಸ್ಪೆಂಡ್‌ಗೂ ಆ ಪ್ರಕರಣಕ್ಕೂ ನಿಜವಾದ ಲಿಂಕ್ ಏನು ಎಂಬುದನ್ನು ಪೊಲೀಸ್ ಕಮೀಷನರ್ ಮಾತ್ರ ಹೇಳಲು ಸಾಧ್ಯ.

ಹೊನ್ನಪ್ಪನವರ ಅಮಾಯಕರು ಅಂದರೂ ಪೊಲೀಸ್ ಕಮೀಷನರ್ ಹೀಗೆಕೆ ಮಾಡಿದ್ರು ಎಂಬುದು ಕೂಡಾ ಆ ಮಹದೇವನೇ ಬಲ್ಲ.


Spread the love

Leave a Reply

Your email address will not be published. Required fields are marked *

You may have missed