ಟೈರ್ ಬ್ಲಾಸ್ಟ್ ಕಾರು ಪಲ್ಟಿ “ಹೆಡ್‌ಕಾನ್ಸಟೇಬಲ್” ದುರ್ಮರಣ…

ಕಾರು ವೇಗವಾಗಿ ಹೋಗುತ್ತಿದ್ದಾಗ ಟೈರ್ ಬ್ಲಾಸ್ಟ್
ಪಲ್ಟಿಯಾದ ಕಾರಿನಲ್ಲಿದ್ದ ಹೆಡ್‌ಕಾನ್ಸಟೇಬಲ್ ದುರ್ಮರಣ
ಕಲಬುರಗಿ: ಕಾರು ವೇಗವಾಗಿ ಹೋಗುತ್ತಿದ್ದ ಸಮಯದಲ್ಲಿ ಟೈರ್ ಬ್ಲಾಸ್ಟಾದ ಪರಿಣಾಮ ವಾಹನ ಪಲ್ಟಿಯಾಗಿ ಹೆಡ್‌ಕಾನ್ಸಟೇಬಲ್ ಸಾವಿಗೀಡಾದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಪೆಟ್ರೋಲ್ ಬಂಕ್ ಹತ್ತಿರ ಸಂಭವಿಸಿದೆ.
ಕಲಬುರಗಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ 52 ವಯಸ್ಸಿನ ಮೋಯಿಜುದ್ದಿನ್ ಸಾವಿಗೀಡಾಗಿದ್ದು, ಇವರ ಸಹೋದರ ನಜುಮೊದ್ಧೀನ ಮತ್ತು ಇನ್ನೊಬ್ಬರಿಗೆ ಗಾಯಗಳಾಗಿವೆ.
ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಲಬುರಗಿಯಿಂದ ಕಾರಿನಲ್ಲಿ ಮಳಖೇಡಕ್ಕೆ ಹೋಗುವಾಗ ಕಾರಿನ ಟಯರ್ ಬ್ಲಾಸ್ಟ್ ಆಗಿ ಕಾರು ಪಲ್ಟಿಯಾಗಿದೆ.
ಮಳಖೇಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.