‘211’ ಇನ್ಸಪೆಕ್ಟರ್‌ಗಳ ವರ್ಗಾವಣೆಗೆ ‘111’ ತೊಡಕು- Put On Hold….

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿತ್ತು
ವರ್ಗಾವಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಆದೇಶಗಳನ್ನ ತಡೆ ಹಿಡಿದ ಇಲಾಖೆ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿ 211 ಪೊಲೀಸ್ ಇನ್ಸಪೆಕ್ಟರ್‌ಗಳನ್ನ ವರ್ಗಾವಣೆ ಮಾಡಿ, ನಿನ್ನೆ ರಾತ್ರಿಯಷ್ಟೇ ಆದೇಶ ಹೊರಡಿಸಿತ್ತು.
ಆದೇಶ ಹೊರಬಿದ್ದ ಕೆಲವು ಗಂಟೆಗಳ ನಂತರ ಹಲವರು ಪ್ರಶ್ನಿಸಿದಾಗ ಕೆಲವು ಇನ್ಸಪೆಕ್ಟರ್ ಆದೇಶ ತಡೆ ಹಿಡಿಯಲಾಗಿತ್ತು. ಆದರೆ, ಅದು ಮಧ್ಯಾಹ್ನದ ವೇಳೆಗೆ ಹಲವು ರೀತಿಯಲ್ಲಿ ಚರ್ಚೆಗೆ ಕಾರಣವಾಯಿತು. ಹೀಗಾಗಿ ಎಲ್ಲ ಆದೇಶವನ್ನ ತಡೆ ಹಿಡಿಯಲಾಗಿದೆ.
ನೂರೊಂದು ಸಮಸ್ಯೆಗಳು ಬಗೆಹರಿದ ನಂತರ ವರ್ಗಾವಣೆ ಆದೇಶ ಮತ್ತೆ ಹೊರ ಬೀಳಲಿದೆ ಎಂದು ಹೇಳಲಾಗಿದ್ದು, ವರ್ಗಾವಣೆಯಾಗಬೇಕಾದ ಇನ್ಸಪೆಕ್ಟರುಗಳು ಮತ್ತೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.