ಧಾರವಾಡ: ಏ.. ನೀ ಏನ್ ‘ವ….’ ಬುದ್ಧಿ ಏನ್ ‘ಮು…’ ಇಟ್ಟಿಯೇನ್: ಐವರು ಉಪನಗರ ಠಾಣೆ ಪೊಲೀಸರ ಮೇಲೆ FIR..

ಧಾರವಾಡ: ಪ್ರಕರಣವೊಂದರ ಸಂಬಂಧವಾಗಿ ಉಪನಗರ ಠಾಣೆಗೆ ಹೋದ ವಕೀಲರೊಬ್ಬರ ಮೇಲೆ ಹಲ್ಲೆ ನಡೆದಿದೆ ಎಂದು ದೂರು ನೀಡಲಾಗಿದ್ದು, ಐವರು ಪೊಲೀಸರು ಸೇರಿದಂತೆ ಹಲವರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಲತಾ ರಾಠೋಡ ಅವರ ಕೋರಿಕೆಯ ಮೇರೆಗೆ ಉಪನಗರ ಪೊಲೀಸ್ ಠಾಣೆಗೆ ಬಂದ ವಕೀಲ ತಾಯಪ್ಪ ಪವಾರ ಎಂಬುವವರ ಜೊತೆ ಪೊಲೀಸ್ ಎಂ.ಬಿ.ಪಾಟೀಲ ಸೇರಿ ಹಲವರು ಅಸಹ್ಯವಾಗಿ ಮಾತಾಡಿದ್ದಾರೆ ಸಲ್ಲಿಸಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.
FIR ಪ್ರತಿ..
ಪೊಲೀಸರು ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದು ಯಾವ ಹಂತಕ್ಕೆ ಬಂದು ನಿಲ್ಲುತ್ತದೆ ಎಂಬುದು ಯಕ್ಷಪ್ರಶ್ನೆಯಾಗಿದೆ.