ಧಾರವಾಡ ಬಳಿ ಭೀಕರ ಅಪಘಾತ- ಮೂವರ ದುರ್ಮರಣ, ಓರ್ವನ ಸ್ಥಿತಿ ಗಂಭೀರ…

ಧಾರವಾಡ: ವೇಗವಾಗಿ ಹೋಗುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿ ಸಾವಿಗೀಡಾದ ಘಟನೆ ಕ್ಯಾರಕೊಪ್ಪ ಸೇತುವೆಯ ಹತ್ತಿರ ಸಂಭವಿಸಿದೆ.
ಮೂಲತಃ ಚೆನ್ನರಾಯಪಟ್ಟಣದವರೆಂದು ಹೇಳಲಾಗಿರುವ ನಾಲ್ವರು ಬೆಳಗಾವಿಯಿಂದ ತಮ್ಮೂರಿಗೆ ಮರಳಿ ಹೋಗುತ್ತಿರುವಾಗ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳದಲ್ಲಿ ಇಬ್ಬರು ಸಾವಿಗೀಡಾಗಿದ್ದು, ಆಸ್ಪತ್ರೆಗೆ ಸಾಗಿಸುವಾಗ ಓರ್ವ ಮೃತಪಟ್ಟಿದ್ದು, ಮತ್ತೋರ್ವನನ್ನ ಕಿಮ್ಸಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದು, ಆತನ ಸ್ಥಿತಿಯೂ ವಿಷಮವಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದು, ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.