ರೋಹಿಣಿ “ರೂಪಾ-ಕುಸುಮ”- ಇದು ಕಥೆಯಲ್ಲ ಜೀವನ…
1 min readಧಾರವಾಡ: ಇಡೀ ರಾಜ್ಯದ ಪ್ರಜ್ಞಾವಂತರು ಇಬ್ಬರು ವಿದ್ಯಾವಂತ ಮಹಿಳೆಯರ ಸೋಷಿಯಲ್ ಮೀಡಿಯಾ ವಾರ್‌ನ್ನ ಮೂಖಪ್ರೇಕ್ಷಕರಾಗಿ ನೋಡುವ ದೌರ್ಭಾಗ್ಯ ಬಂದೊದಗಿರುವುದು ದುರಂತವೇ ಸರಿ.
ಐಎಎಸ್ ರೋಹಿಣಿ ಸಿಂಧೂರಿ ಅವರ ಕೆಲವು ವಿಷಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಐಪಿಎಸ್ ಅಧಿಕಾರಿ ಡಿ.ರೂಪಾ ಮೌನೀಷ ಮೌದ್ಗಿಲ್ ಅವರು ಪ್ರಸ್ತಾಪ ಮಾಡಿದ್ರು. ಅದಾದ ನಂತರ ಯೋಗ್ಯವಲ್ಲದ ಭಾವಚಿತ್ರಗಳನ್ನು ಕೂಡಾ ಹಾಕಿದ್ರು.
ಇದಾದ ಮೇಲೆ ದಿವಂಗತ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಹನಮಂತರಾಯಪ್ಪ ಅವರು ಟ್ವೀಟ್ ಮಾಡುವ ಮೂಲಕ “ಎಲ್ಲಕ್ಕೂ ಕಾಲ ಬರತ್ತೆ” ಎನ್ನುವುದನ್ನ ಹೇಳಿಕೊಂಡರು. ಅಲ್ಲಿಂದ ಶುರುವಾಗಿದ್ದು ಬೇರೆಯದ್ದೇ ಸ್ವರೂಪದ ವಾತಾವರಣ.
ರಾಜ್ಯದ ಜನರು ಈ ಐಎಎಸ್ ಮತ್ತೂ ಐಪಿಎಸ್‌ಗಳ ಬಗ್ಗೆ ಯಾವ ಥರದ ಗೌರವ ಹೊಂದಿದ್ದಾರೆಂಬ ಕಲ್ಪನೆಯೂ ಇಲ್ಲದ ರೀತಿಯಲ್ಲಿ “ಶಾಣ್ಯಾ” ಮಂದಿ ನಡೆದುಕೊಳ್ಳುತ್ತಿರುವುದು ಸೋಜಿಗ ಮೂಡಿಸುತ್ತಿದೆ.
ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿರುವ ವೇಗವನ್ನ ನೋಡಿದ್ರೇ, ಕೆಲವರು ಬೀದಿಯಲ್ಲಿ ಮಾನವನ್ನ ಕಳೆದುಕೊಳ್ಳುವುದು ನಿಶ್ಚಿತ ಅನಿಸತೊಡಗಿದೆ.
ರಾಜ್ಯದಲ್ಲಿ ರಾಜಕಾರಣಿಗಳ ಹಲವು ‘ಜೀವನ’ ನೋಡಿದವರಿಗೆ ಐಎಎಸ್-ಐಪಿಎಸ್‌ಗಳ ‘ಜೀವನ’ ನೋಡುವ ಸ್ಥಿತಿ ಬಂದೋದಗಿದೆ. ಇದನ್ನ ನೋಡಿಕೊಂಡು ಆಳುವವರು ಸುಮ್ಮನೆ ಕೂತಿದ್ದಾರೆ. ಎಂತಹ ದುರ್ಧೈವವಲ್ಲವೇ…