ಧಾರವಾಡದಲ್ಲಿ “ಟಾವರ್ ಏರಿದ ಹೋರಾಟ”- ಕಣ್ಣು ತೆರೆಯೋ ದೊರೆ….

ಧಾರವಾಡ: ಹಲವು ದಿನಗಳಿಂದ ಜಲಮಂಡಳಿಯ ನೌಕರಿ ವಂಚಿತರು ನಡೆಸುತ್ತಿದ್ದ ಹೋರಾಟಗಾರನೋರ್ವ ತೀವ್ರವಾಗಿ ನೊಂದು ಮೊಬೈಲ್ ಟಾವರ್ ಏರಿದ ಘಟನೆ ಧಾರವಾಡದ ಜುಬ್ಲಿ ವೃತ್ತದ ಬಳಿ ನಡೆಯುತ್ತಿದೆ.
ಅವಳಿನಗರದಲ್ಲಿ ನೀರು ಸರಬರಾಜು ಮಾಡುತ್ತಿದ್ದ ನೌಕರರನ್ನ ಎಲ್ ಆ್ಯಂಡ್ ಟಿ ಕಂಪನಿ ಹೊರ ಹಾಕಿದ್ದು, ಅವರೀಗ ತಮ್ಮ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಬೆಂಬಲವಾಗಿ ನಿಂತಿದ್ದು ‘ಬಡವರ ಮಗ’ ಬಸವರಾಜ ಕೊರವರ.
ಟಾವರ್ ಏರಿರೋ ವೀಡಿಯೋ…
ಹೋರಾಟಕ್ಕೆ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಹೋರಾಟವೂ ಹಲವು ರೀತಿಯಲ್ಲಿ ಆರಂಭವಾಗಿದೆ. ಹಾಗಾಗಿಯೇ ನೊಂದ ನೌಕರನೋರ್ವ ಟಾವರ್ ಏರಿ ತನ್ನ ಆಕ್ರೋಶವ್ಯಕ್ತಪಡಿಸುತ್ತಿದ್ದಾನೆ.