“ಕಸಬರಿಗೀ” ಜೇಡರ ಡಾಕ್ಟರ್: BAMS ಡಾಕ್ಟರ್ ಇನ್ English Medicine….

ನವಲಗುಂದ: ಕಸಬರಿಗೆ ಸಿಂಬಾಲ್ ಹೊಂದಿರುವ ಆಮ್ ಆದ್ಮಿ ಪಕ್ಷದ ಜೇಡರ ಡಾಕ್ಟರ್, ತಮ್ಮ ವೃತ್ತಿಯಲ್ಲಿ ಸರಕಾರದ ನಿಯಮಗಳನ್ನ ಪಾಲನೆ ಮಾಡುತ್ತಿಲ್ಲವೆಂಬ ಕೂಗು ಕೇಳಿ ಬರಲಾರಂಭಿಸಿದೆ.
ಆಮ್ ಆದ್ಮಿ ಪಕ್ಷದ ನವಲಗುಂದ ಕ್ಷೇತ್ರದ ಆಕಾಂಕ್ಷಿಯಾಗಿರುವ ಜೇಡರ ಡಾಕ್ಟರ್, ಒಬ್ಬರಿಗೂ ಉಚಿತವಾಗಿ ಚಿಕಿತ್ಸೆ ನೀಡಿದ ಉದಾಹರಣೆ ಇಲ್ಲವಾದರೂ, ಆಡಳಿತಾರೂಢ ಪಕ್ಷದ ಮೋದಿಯವರ ಬಗ್ಗೆ ಮಾತಾಡದ ಕ್ಷಣಗಳಿಲ್ಲವೆಂದು ಹೇಳಲಾಗುತ್ತಿದೆ.
ಯಾವುದೇ ಸಮಾಜದ ಏಳಿಗೆಯನ್ನ ಸಹಿಸದ ಮನಸ್ಥಿತಿಯನ್ನ ಜೇಡರ ಡಾಕ್ಟರ್ ಹೊಂದಿರುವುದರಿಂದ ಹಿಂದೂ ಸಮಾಜದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ “ಯತ್ರಾ-ಪತ್ರಾ” ಬರೆಯೋದನ್ನ ರೂಢಿ ಮಾಡಿಕೊಂಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಪ್ರಜ್ಞಾವಂತರು ಹೇಳುತ್ತಿದ್ದಾರೆ.
ಓರ್ವ ಬಿಎಎಂಎಸ್ ಡಾಕ್ಟರ್ ಆದವನು ಇಂಜೆಕ್ಷನ್ ಮಾಡಬಾರದೆಂಬ “ನಿಯಮ” ಅರಿಯದೇ ನೂರು ರೂಪಾಯಿ ಪಡೆದು ಇಂಜೆಕ್ಷನ್ ಮಾಡಿ, ಹಣವನ್ನ ಜೇಬಿನಲ್ಲಿಟ್ಟುಕೊಳ್ಳುವ ಮುನ್ನ ಸ್ವಾಭಿಮಾನ ಎಲ್ಲಿ ಅಡಗಿರತ್ತೋ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾಗಳ ಮೂಲಕ ಎಂಎಲ್‌ಎ ಆಗ ಹೊರಟ ಜೇಡರ ಡಾಕ್ಟರ್ ಅವರಿಗೆ, ಬಿಎಎಂಎಸ್ ನಿಯಮ ಗಾಳಿಗೆ ತೂರುತ್ತಿರುವುದು ಕಣ್ಣಿಗೆ ಕಾಣದೇ ಇರುವುದು ಅಚ್ಚರಿಯೇ ಸರಿ.