ಬಿಜೆಪಿ “ಬ್ಯಾನರ್”ಗಳಿಂದ ಕಂಗಾಲಾದ್ರಾ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ…!?

ಹುಬ್ಬಳ್ಳಿ: ನವಲಗುಂದ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಕಿರುವ ಬ್ಯಾನರ್‌ಗಳು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಕೈ ಹಿಡಿದಿರುವ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿಯವರನ್ನ ಕಂಗಾಲು ಮಾಡಿವೇಯಾ ಎಂಬ ಪ್ರಶ್ನೆ ಮೂಡಿದೆ.
ಇಂತಹ ಪ್ರಶ್ನೆಗೆ ಕಾರಣವಾಗಿದ್ದು ಸ್ವತಃ ಕೋನರೆಡ್ಡಿಯವರ ನಡೆ. ಕಾಂಗ್ರೆಸ್ ಪಕ್ಷದ ಯಾವುದೇ ಮುಖಂಡರನ್ನೂ ಹೊಂದದೇ ಒಬ್ವರೇ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಸಮಾಧಾನವನ್ನ ಹೊರ ಹಾಕಿದ್ದಾರೆ. ನವಲಗುಂದ ಕ್ಷೇತ್ರದ ಹಳೇಯ ಕಾಂಗ್ರೆಸ್ ಪಕ್ಷದ ಯಾವೊಬ್ಬ ನಾಯಕನು ಇಲ್ಲದೇ ಇರುವುದು ಕೂಡಾ, ಕೋನರೆಡ್ಡಿಯವರಿಗೆ ಆಗಿರುವ “ನೋವು” ಎಂತಹದು ಎಂಬುದು ಗೊತ್ತಾಗುತ್ತಿದೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ವೀಡಿಯೋ ನೋಡಿಬಿಡಿ ಪೂರ್ಣವಾಗಿ…
ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಉಳಿಸಿ, ಬೆಳೆಸಿಕೊಂಡು ಬಂದಿರುವ ಮಾಜಿ ಸಚಿವ ಕೆ.ಎನ್.ಗಡ್ಡಿಯವರಾಗಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನೋದ ಅಸೂಟಿಯಾಗಲಿ ಕಾಣದೇ ಇರುವ “ಸಮಸ್ಯೆ” ಕೋನರೆಡ್ಡಿಯವರಿಗಷ್ಟೇ ಕಂಡಿರುವುದು ಕೂಡಾ ಅವರ ಕಂಗಾಲುತನಕ್ಕೆ ಕಾರಣವೆಂಬ ಕುಹಕವನ್ನ ಹಲವರು ಮಾಡುತ್ರಿದ್ದಾರೆ.