IPS ಆರ್.ದಿಲೀಪ್ ಹೃದಯಾಘಾತ- ಇನ್ನಿಲ್ಲ..

ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿ ಆರ್.ದಿಲೀಪ್ ಅವರು ತೀವ್ರ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದ ಆರ್.ದಿಲೀಪ್ ಅವರು, ತಮ್ಮ ಕರ್ತವ್ಯದ ಮೂಲಕ ಸಾಕಷ್ಟು ಹೆಸರು ಪಡೆದುಕೊಂಡಿದ್ದರು.
ತೀವ್ರ ಎದೆ ನೋವಿನಿಂದ ಬಳಲಿದ ಅವರನ್ನ ಬನ್ನೇರುಘಟ್ಡದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.