Posts Slider

Karnataka Voice

Latest Kannada News

ಧಾರವಾಡ ‘KIDB ಹಗರಣ CID’ಗೆ: ಬಿಗ್ ಟ್ವಿಸ್ಟ್ ಪಡೆದ “ಬಸಣ್ಣನ ಹೋರಾಟ”…

1 min read
Spread the love

ಧಾರವಾಡ: ರೈತರ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಯನ್ನ ಪಡೆದು ಸರಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣವೀಗ ಸಿಐಡಿ ಅಂಗಳಕ್ಕೆ ಹೋಗಿದ್ದು, ಕರ್ನಾಟಕವಾಯ್ಸ್.ಕಾಂಗೆ ಉನ್ನತ ಮೂಲಗಳು ಖಚಿತಪಡಿಸಿವೆ.

ಸಾಮಾಜಿಕ ಕಾರ್ಯಕರ್ತ ಹಾಗೂ ಜನಜಾಗೃತಿ ವೇದಿಕೆಯ ಬಸವರಾಜ ಕೊರವರ ಅವರು, ಕಳೆದ ಕೆಲವು ದಿನಗಳ ಹಿಂದೆ ಪ್ರಕರಣವನ್ನ ಬಯಲಿಗೆ ಎಳೆದಿದ್ದರು. ಇದಾದ ಮೇಲೆ ಇಲಾಖಾವಾರು ತನಿಖೆ ನಡೆದು ಸುಮಾರು 20 ಕೋಟಿ ರೂಪಾಯಿ ವಂಚನೆ ನಡೆದಿರುವುದು ಹೊರ ಬಂದಿತ್ತು.

ತನಿಖೆಯಿಂದ ಮಾಹಿತಿ ಹೊರ ಬರುತ್ತಿದ್ದ ಹಾಗೇ ಇಲಾಖೆಯ ಮಹಿಳಾ ಅಧಿಕಾರಿಯೋರ್ವರು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, 3 ಬ್ಯಾಂಕ್ ಹಾಗೂ 11 ಜನರ ಮೇಲೆ ಎಫ್ಐಆರ್ ದಾಖಲಾಗಿದೆ.

ಪ್ರಕರಣದ ಪ್ರಾಥಮಿಕ ತನಿಖೆ ಕೈಗೊಂಡ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರು, ಸಂಪೂರ್ಣ ವರದಿಯನ್ನ ಸಿಐಡಿಗೆ ತಲುಪಿಸಿರುವರೆಂದು ತಿಳಿದು ಬಂದಿದೆ. ಈ ಮೂಲಕ ಬಸವರಾಜ ಕೊರವರ ಹೋರಾಟ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆಯಿದೆ.

ಕೆಐಡಿಬಿ ನಿವೃತ್ತ ಹಾಗೂ ಹಾಲಿ ಅಧಿಕಾರಿ, ಸಿಬ್ಬಂದಿಗಳ ಜೊತೆಗೆ ಕೆಲವು ದುಷ್ಟ ಪತ್ರಕರ್ತರು, ಫುಡಾರಿ ರಾಜಕಾರಣಿಗಳು ಹಾಗೂ 94 ಬ್ಯಾಚಿನ ಓರ್ವ ಪೊಲೀಸ್ ಸಿಬ್ಬಂದಿ ಕೂಡಾ, ಕಂಬಿ ಹಿಂದೆ ಹೋಗುವ ಸಾಧ್ಯತೆಗಳು ನಿಚ್ಚಳವಾಗಿವೆ.


Spread the love

Leave a Reply

Your email address will not be published. Required fields are marked *