Posts Slider

Karnataka Voice

Latest Kannada News

KIDB ಹಗರಣ ‘3 ಬ್ಯಾಂಕ್ ಸೇರಿ 14 ಜನರ’ ಮೇಲೆ ‘FIR’ “ಬಸವರಾಜ ಕೊರವರ” ಹೋರಾಟಕ್ಕೆ ಸಿಕ್ಕ “ವಿಜಯ”..

1 min read
Spread the love

ಧಾರವಾಡ: ರೈತರ ಹೆಸರಿನಲ್ಲಿ ಸರಕಾರಕ್ಕೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಪ್ರಕರಣವನ್ನ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರು ಹೊರಗೆ ಹಾಕಿದ್ದೆ ತಡ, ಆರೋಪಿಗಳ ವಿರುದ್ಧ ಇಲಾಖೆಯ ಅಧಿಕಾರಿಗಳೇ ಪ್ರಕರಣ ದಾಖಲು ಮಾಡಿದ್ದಾರೆ.

ಹೌದು… ಕೆಐಡಿಬಿಯಲ್ಲಿ 2012 ರಲ್ಲಿ ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಮತ್ತೆ ಹಣವನ್ನ ಪಡೆಯಲಾಗಿದೆ ಎಂದು ಬಸವರಾಜ ಕೊರವರ ಅವರು ದಾಖಲೆ ಸಮೇತ ಹೊರಗೆ ಹಾಕಿದ್ದರು. ಅದೀಗ ಸತ್ತವಾಗಿದ್ದು ಬರೋಬ್ಬರಿ 20 ಕೋಟಿ ರೂಪಾಯಿ ವಂಚನೆ ನಡೆದಿದೆ ಎಂದು ಇಲಾಖಾ ಅಧಿಕಾರಿ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೂರು ಬ್ಯಾಂಕ್ ಸೇರಿದಂತೆ 14 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.

ಕಳೆದ ಎಂಟು ದಿನಗಳ ಹಿಂದೆ ಧಾರವಾಡದಲ್ಲಿ ಮಾಧ್ಯಮಗಳಿಗೆ ದಾಖಲೆ ಸಮೇತ ವಿವರ ನೀಡಿದ್ದ ಸಾಮಾಜಿಕ ಕಳಕಳಿ ಹೊಂದಿರುವ ಬಸವರಾಜ ಕೊರವರ ಅವರು, ಇದೇ ವಿಷಯಕ್ಕಾಗಿ ಲೋಕಾಯುಕ್ತದಲ್ಲೂ ದೂರು ನೀಡಿದ್ದಾರೆ. ಅಷ್ಟರಲ್ಲಿ ಇಲಾಖೆಯಲ್ಲಿ ನಡೆದ ತನಿಖೆ ವೇಳೆಯಲ್ಲಿ ಸುಮಾರು 20 ಕೋಟಿ ರೂಪಾಯಿ ಹಣವನ್ನ ಸರಕಾರಕ್ಕೆ ವಂಚನೆ ಮಾಡಿರುವುದು ಬಹಿರಂಗಗೊಂಡಿದೆ. ಈ ಮೂಲಕ ಬಸವರಾಜ ಕೊರವರ ಅವರು ನಡೆಸುವ ಹೋರಾಟದಲ್ಲಿ “ಸತ್ಯ” ಇದ್ದೆ ಇರತ್ತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಷ್ಟೇ ಅಲ್ಲ, ಸರಕಾರದ ಹಣವನ್ನ ಕಾಪಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *