ಕೊಲೆಪಾತಕ ಶಿವಾ ‘ಕಸಬಾಪೇಟೆ ಇನ್ಸಪೆಕ್ಟರ್ ಜೀಪಿನಲ್ಲಿ’ ತಿರುಗುತ್ತಿದ್ದ: ಸಸ್ಪೆಂಡ್‌ಗೆ ಮೂಲ ಕಾರಣ…!!!

ಹುಬ್ಬಳ್ಳಿ: ಸಂತೋಷ ಮುರಗೋಡ ಎಂಬ ಅಮಾಯಕ ಯುವಕನೋರ್ವನ ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿದ್ದ ಆರೋಪಿ ಶಿವಾ ನಾಯ್ಕ ಕಸಬಾಪೇಟೆ ಪೊಲೀಸ್ ಇನ್ಸಪೆಕ್ಟರ್ ಜೀಪಿನಲ್ಲಿಯೇ ತಿರುಗುತ್ತಿದ್ದ ಕಾರಣವೇ ಇನ್ಸಪೆಕ್ಟರ್ ಅಮಾನತ್ತಿಗೆ ಮೂಲವಾಗಿದೆ ಎಂದು ಹೇಳಲಾಗುತ್ತಿದೆ.

ಕೇಶ್ವಾಪುರ ಠಾಣೆಯಲ್ಲಿ ‘ಎಂಓಬಿ’ ಆಗಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಕ್ರೈಂ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಿವಾ ನಾಯ್ಕ, ಕಳೆದ ವಾರ ಸಂತೋಷ ಮುರಗೋಡ ಎಂಬಾತನನ್ನ ಚಾಕುವಿನಿಂದ ಇರಿದು ಹತ್ಯೆ ಮಾಡಿ, ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದ.
ಹತ್ಯೆಗೊಳಗಾದ ಸಂತೋಷನ ಸಂಬಂಧಿಕರು ಪೊಲೀಸ್ ಠಾಣೆಯ ಮುಂಭಾಗವೇ ಪ್ರತಿಭಟನೆ ನಡೆಸಿ, ಪ್ರಕರಣದಲ್ಲಿ ಪೊಲೀಸರು ಆರೋಪಿಗೆ ರಕ್ಷಣೆ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಆಕ್ರೋಶವ್ಯಕ್ತಪಡಿಸಿದ್ದರು.
ಇದೇ ಕಾರಣದಿಂದ ದಕ್ಷ ಅಧಿಕಾರಿ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಮಾಹಿತಿಯನ್ನ ಕಲೆ ಹಾಕಿದಾಗ, ಅಸಲಿ ಸತ್ಯ ಹೊರ ಬಂದಿದೆ. ಅದೇ ಕಾರಣಕ್ಕೆ ಪೊಲೀಸ್ ಇನ್ಸಪೆಕ್ಟರ್ ಅಡಿವೆಪ್ಪ ಬನ್ನಿ ಅವರನ್ನ ಅಮಾನತ್ತು ಮಾಡಿ, ಇಲಾಖೆಯ ಗೌರವವನ್ನ ಕಾಪಾಡಿದ್ದಾರೆ.