ರೇಪ್ ಕೇಸ್: ‘ಸಿಪಿಐ’ ಉಮೇಶ ಅಮಾನತ್ತು ಮಾಡಿದ ‘ಐಜಿಪಿ’…

ಚಳ್ಳಕೆರೆ ಠಾಣೆ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ರೇಪ್ ಕೇಸ್.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪೊಲೀಸ್ ಠಾಣೆ ಸಿಪಿಐ ಉಮೇಶ್.
ಸಿಪಿಐ ಜಿ.ಬಿ.ಉಮೇಶ್ ಅಮಾನತ್ತುಗೊಳಿಸಿ ಐಜಿಪಿ ಆದೇಶ.
ದಾವಣಗೆರೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಆದೇಶ

ಈ ಕೆಳಗಿನ ಮಾಹಿತಿ ಹೊರ ಬಂದ ಕೆಲವೇ ಸಮಯದಲ್ಲಿ ಅಮಾನತ್ತು ಮಾಡಿ, ಆದೇಶ ಹೊರಡಿಸಲಾಗಿದೆ.
ಚಿತ್ರದುರ್ಗ: ಸಹಾಯ ಮಾಡುವ ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ರೇಪ್ ಕೇಸ್ ದಾಖಲಾಗಿದೆ. ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ಸಂತ್ರಸ್ತೆಯಿಂದ ದೂರು ನೀಡಿದ್ಧಾರೆ. ಚಿತ್ರದುರ್ಗ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5 ವರ್ಷದ ಹಿಂದೆ ದಾವಣಗೆರೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ರು, ನಿವೇಶನ ಸಮಸ್ಯೆ ಹಿನ್ನೆಲೆ ಉಮೇಶ್ ಬಳಿ ಸಹಾಯ ಕೇಳಿದ್ದೆವು. ಆಗ ದಾವಣಗೆರೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದರು. ಯುವತಿ ಶಿವಮೊಗ್ಗದಲ್ಲಿ ಓದುತ್ತಿರುವಾಗಲೂ ಅತ್ಯಾಚಾರ.
ಸಿಪಿಐ ಉಮೇಶ್ ಈಗಾಗ್ಲೆ ಇಬ್ಬರನ್ನ ಮದುವೆಯಾಗಿದ್ದರು. 3ನೇ ಹೆಂಡ್ತಿ ತರ ಇರು ಎಂದು ಯುವತಿಗೆ ಉಮೇಶ್ ಒತ್ತಡ ಹಾಕುತ್ತಿದ್ದರು. ಯುವತಿ ಹಾಗೂ ಪೋಷಕರಿಗೂ ಉಮೇಶ್ ಪ್ರಾಣ ಬೆದರಿಕೆ ಹಾಕಿದ್ಧಾರೆ. ಉಮೇಶ್ ವಿರುದ್ಧ ಕಲಂ 376 ಕ್ಲಾಸ್ (2)(k)(n), 323 ,504, 506 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಾಗ್ತಿದ್ದಂತೆ ಉಮೇಶ್ ನಾಪತ್ತೆಯಾಗಿದ್ಧಾರೆ.