ಬಿಜೆಪಿ ನಂಬಿ ಹೋಗಿದ್ದ “ಬಸವರಾಜ ಹೊರಟ್ಟಿ”ಯವರಿಗೆ ‘ಸಭಾಪತಿ ಸ್ಥಾನ’ ದೂರ… ದೂರ…!

ಬೆಂಗಳೂರು: ಜಾತ್ಯಾತೀತ ಜನತಾದಳವನ್ನ ಬಿಟ್ಟು ಭಾರತೀಯ ಜನತಾ ಪಕ್ಷವನ್ನ ಸೇರಿಕೊಂಡು ಮತ್ತೆ ಸಭಾಪತಿಯಾಗಬೇಕಿದ್ದ ಹಿರಿಯ ರಾಜಕಾರಿಣಿಗೆ ಬಿಜೆಪಿ ಕೈ ಕೊಡಲು ನಿರ್ಧಾರ ಮಾಡಿದೆ ಎಂದು ಪ್ರಮುಖರು ಮಾತನಾಡಿಕೊಳ್ಳುತ್ತಿದ್ದಾರೆ.

ಕಳೆದ ಮೂರು ದಶಕಗಳಿಂದ ಶಿಕ್ಷಕರ ಕ್ಷೇತ್ರದಿಂದ ಗೆಲ್ಲುತ್ತ ಬಂದಿದ್ದ ಬಸವರಾಜ ಹೊರಟ್ಟಿಯವರು, ಕೊನೆಯ ಚುನಾವಣೆಯಲ್ಲಿ ಬಿಜೆಪಿಗೆ ಸೇರಿ, ಸಭಾಪತಿಯಾಗುವ ಭರವಸೆ ಹೊಂದಿದ್ದರು.
ಹಲವು ರಾಜಕೀಯ ವಿದ್ಯಮಾನಗಳು ಪಕ್ಷದಲ್ಲಿ ನಡೆದಿದ್ದು, ಬಹುತೇಕ ಬಸವರಾಜ ಹೊರಟ್ಟಿಯವರಿಗೆ ಸಭಾಪತಿ ನೀಡದಿರಲು ನಿರ್ಧರಿಸಿದ್ದಾರೆಂದು ಗೊತ್ತಾಗಿದೆ.