ಧಾರವಾಡ ಜಿಲ್ಲೆಯಲ್ಲಿ “ಮಕ್ಕಳ ಕಳ್ಳರು” SP ಲೋಕೇಶ ಜಗಲಾಸರ್ ಹೇಳಿದ್ದೇನು…!!??

ಧಾರವಾಡ: ಜಿಲ್ಲೆಯಲ್ಲಿ ಸೋಷಿಯಲ್ ಮೀಡಿಯಾಗಳ ಮೂಲಕ ಮಕ್ಕಳ ಕಳ್ಳರಿದ್ದಾರೆಂಬ ಭಾವನೆಯನ್ನ ಕೆಲವರು ಹುಟ್ಟಿಸುತ್ತಿದ್ದು, ಅಂತವರ ವಿರುದ್ಧ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಮಕ್ಕಳ ಕಳ್ಳರೆಂಬ ಕಾರಣಕ್ಕೆ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಬುಡಬುಡಿಕೆಯವರ ಮೇಲೆ ಹಲ್ಲೆ ಯತ್ನ ನಡೆದಿದೆ. ಇದೆಲ್ಲವವದಂತಿಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಕರ್ನಾಟಕವಾಯ್ಸ್.ಕಾಂಗೆ ಹೇಳಿಕೆ ನೀಡಿದ್ದಾರೆ.
ಸಾರ್ವಜನಿಕರು ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಮಾಹಿತಿಗಳನ್ನ ಪರಿಶೀಲನೆ ಮಾಡಿ ನಂಬಬೇಕೆಂದು ಎಸ್ಪಿ ಮನವಿ ಮಾಡಿಕೊಂಡಿದ್ದಾರೆ.