ನಾ ಅಧಿಕಾರಕ್ ಬಂದ್ ಮ್ಯಾಲ್ ಮಾಡ್ತೇನಿ ಅಂತಷ್ಟ್ ಹೇಳತೇನಿ, ಬ್ಯಾರೇನ್ ಹೇಳಬೇಕ್: Ex Mla ಕೋನರೆಡ್ಡಿ…

ಹುಬ್ಬಳ್ಳಿ: ಪ್ರವಾಹದಿಂದ ತೊಂದರೆಗೆ ಒಳಗಾದವರ ಸಂಕಷ್ಟ ಬಗೆಹರಿಸಲು ವಾಸ್ತವ್ಯ ಮಾಡಲು ಮುಂದಾಗಿರುವ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ವಲಸೆ ಬಂದಿರುವ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿಯವರು, ನಾನ್ ಅಧಿಕಾರಕ್ಕೆ ಬಂದರೇ ನಿಮಗೆ ಕೆಲಸ ಮಾಡ್ತೇನಿ ಎಂದು ಹೇಳುವ ಮೂಲಕ, ತಮ್ಮ ವಾಸ್ತವ್ಯ ಅಧಿಕಾರ ಪಡೆಯಲು ಎಂಬುದನ್ನ ಹೇಳಿಕೊಂಡಿದ್ದಾರೆ.
ವಾಸ್ತವ್ಯ ಮಾಡುವ ಸಮಯದಲ್ಲಿ ಕಾಂಗ್ರೆಸ್ ಪಕ್ಷವನ್ನ ನವಲಗುಂದ ಕ್ಷೇತ್ರದಲ್ಲಿ ಉಳಿಸಿ, ಬೆಳೆಸಿಕೊಂಡು ಬಂದ ವಿನೋದ ಅಸೂಟಿ, ಕೆ.ಎನ್.ಗಡ್ಡಿ, ಶಿವಾನಂದ ಕರಿಗಾರ ಸೇರಿದಂತೆ ಪಕ್ಷದ ಯಾರೂ ಇಲ್ಲದೇ ಇರುವುದು ಕೂಡಾ, ಈ ವಾಸ್ತವ್ಯ ಕೋನರೆಡ್ಡಿಯವರ “ನಾನು ಅಧಿಕಾರಕ್ಕೆ” ಅಜಂಡಾದಂತೆ ಕಾಣುತ್ತಿದೆ.
ಅವರೇ ಮಾತಾಡಿದ್ದು ಇಲ್ಲಿದೆ ನೋಡಿ…
ನವಲಗುಂದ ಕ್ಷೇತ್ರದಲ್ಲಿ ಪ್ರವಾಹವೂ ಕೂಡಾ ಸರಕಾರದ ಮಾತು ಕೇಳತ್ತೆ ಎನ್ನುವ ಥರದಲ್ಲಿ ಮಾತಾಡಿದ ಎನ್.ಎಚ್.ಕೋನರೆಡ್ಡಿಯವರು, ಕಾಂಗ್ರೆಸ್ ಪಕ್ಷವನ್ನ ನಾಲ್ಕು ತುಂಡುಗಳನ್ನ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆಂದು ಹೇಳಲಾಗುತ್ತಿದೆ.
ಸರಕಾರ ಪರಿಹಾರ ಕೊಡದೇ ಹೋದರೇ, ವಯಕ್ತಿಕವಾಗಿಯಾದರೂ ಪ್ರತಿ ಮನೆ ಮನೆಗೆ ತೆರಳಿ ಧನ ಸಹಾಯ ಮಾಡುವ ಬದಲು, ಅಧಿಕಾರಕ್ಕೆ ಬಂದ ಮೇಲೆ ನಾನು ಕೊಡ್ತೇನಿ ಅಂದರೇ ಏನರ್ಥ. ಅವರು ಬಂದಾಗಲೂ ಕೊಡುವುದು ಸರಕಾರದ (ಸಾರ್ವಜನಿಕರ) ಹಣವೇ ಹೊರತು ವಯಕ್ತಿಕವಲ್ಲ ಎಂಬ ಸತ್ಯ ಪ್ರಜ್ಞಾವಂತರಿಗಿದೆ ಅಲ್ಲವೇ…