Posts Slider

Karnataka Voice

Latest Kannada News

ಹೆಸರು: ಜಾಕೀರಪಾಷಾ ಕಾಲಿಮಿರ್ಚಿ… ಹುದ್ದೆ: ಪೊಲೀಸ್ ಇನ್ಸಪೆಕ್ಟರ್.. ಹಣೆಯಲ್ಲಿ ತಿಲಕ-ಕೈಯಲ್ಲಿ ಆರತಿ…

1 min read
Spread the love

ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಆರಕ್ಷಕರ ನಡೆ

ಹುಬ್ಬಳ್ಳಿ: ಒಂದೇಡೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಪರ-ವಿರೋಧ ಹೋರಾಟ ನಡೆಯುತ್ತಿದ್ದರೇ, ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣೆ ಇನ್ಸೆಕ್ಟರ್ ಕಾಲಿಮಿರ್ಚಿ ತಮ್ಮ ಪೋಲಿಸ್ ಠಾಣೆಯಲ್ಲಿ ವಿಶಿಷ್ಟವಾಗಿ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ. ಈ ಮೂಲಕ ಜಾತಿ, ಧರ್ಮಗಳ ನಡುವೆ ಒಡಕುಂಟು ಮಾಡುವ ಕಿಡಿಗೇಡಿಗಳಿಗೆ ಮಾದರಿಯಾಗಿದ್ದಾರೆ.

ಹೌದು.. ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆ ಅದರಲ್ಲೂ ಠಾಣೆಯ ಇನ್ಸೆಕ್ಟರ್ ಮಾಡಿರುವ ಕೆಲಸ ನೋಡಿದರೆ ತುಂಬಾ ತುಂಬಾ ಖುಷಿಯಾಗುತ್ತದೆ ಸಧ್ಯ ಬಂದಿರುವ ಗಣೇಶ ಹಬ್ಬದಲ್ಲಿ ಠಾಣೆ ಯಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಜಾತಿ – ಧರ್ಮಗಳ ಗೋಡೆ ಕಟ್ಟಿಕೊಂಡವರ ಮಧ್ಯೆ ಭಾವೈಕ್ಯತೆ ಮೆರೆದಿದ್ದಾರೆ ಇನ್ಸೆಕ್ಟರ್‌ ಜಾಕೀರ ಪಾಷಾ ಕಾಲಿಮಿರ್ಚಿ ಮತ್ತು ಠಾಣೆಯ ಸಿಬ್ಬಂದಿಗಳು.

ಸಮಾಜದಲ್ಲಿ ಸರ್ವಧರ್ಮ ಭಾವೈಕ್ಯತೆಯೇ ಮುಖ್ಯ ಎನ್ನುವ ಮಾತಿಗೆ ಹುಬ್ಬಳ್ಳಿ ಗೊಕುಲ್ ರೋಡ್ ಪೊಲೀಸ್ ಠಾಣಾ ಮುಖ್ಯಾಧಿಕಾರಿ ಜಾಕೀರಪಾಷಾ ಕಾಲಿಮಿರ್ಚಿ ಅವರು ಮತ್ತು ಠಾಣೆಯ ಎಲ್ಲಾ ಸಿಬ್ಬಂದಿ ತಾವೇ ಸ್ವತಃ ಗಣೇಶ ನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಸಾಮಾಜಿಕ ಭಾವೈಕ್ಯತೆ ಮೆರೆದಿದ್ದಾರೆ. ಸದಾ ಸಾಮಾಜಿಕ ಕಾರ್ಯಗಳ ಮೂಲಕ ಹೆಸರಾದ ಗೊಕುಲ್ ರೋಡ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಜಾಕೀರಪಾಷಾ ಕಾಲಿಮಿರ್ಚಿ ಇಂದು ಸ್ವತಃ ತಾವೇ ತಮ್ಮ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ. ಹಣೆಗೆ ತಿಲಕ ಇಟ್ಟು ಕೊಂಡು ಕೈಯಲ್ಲಿ ಗಣೇಶ ಮೂರ್ತಿ ಹಿಡಿದು ಪೊಲೀಸ್ ಜೀಪಿನಲ್ಲಿ ತೆರಳಿ ಪ್ರತಿಷ್ಠಾಪನೆ ಮಾಡುವ ಮೂಲಕ ಜಾತಿ – ಧರ್ಮಗಳ ಗೊಡೆ ಕಟ್ಟಿಕೊಂಡವರ ಮಧ್ಯೆ ಭಾವೈಕ್ಯತೆ ಗೆ ಏಕರೂಪ ನೀಡಿದ್ದಾರೆ.

ಇವರ ಈ ಒಂದು ಕಾರ್ಯಕ್ಕೆ ಠಾಣೆಯ ಎಲ್ಲಾ ಸಿಬ್ಬಂದಿ ಸಾಥ್ ನೀಡಿದ್ದಾರೆ . ಹೀಗಾಗಿ ಗೋಕುಲ್ ರೋಡ್ ಪೋಲಿಸ್ ಠಾಣಾಧಿಕಾರಿಯ ಮತ್ತು ಸಿಬ್ಬಂದಿ ಗಳ ಮಾದರಿ ಕಾರ್ಯಕ್ಕೊಂದು ಸಲಾಂ ಹೇಳಲೇಬೇಕು‌


Spread the love

Leave a Reply

Your email address will not be published. Required fields are marked *