ಹಾಳಕುಸುಗಲ್ ಗ್ರಾಪಂ ಸದಸ್ಯ ಸಿಡಿಲಿಗೆ ಬಲಿ…

ನವಲಗುಂದ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ರಭಸವಾಗಿ ಮಳೆ ಆರಂಭವಾಗಿದ್ದರಿಂದ ಅದರಿಂದ ತಪ್ಪಿಸಿಕೊಳ್ಳಲು ಮರದ ಆಸರೆ ಪಡೆದಿದ್ದ ಗ್ರಾಪಂ ಸದಸ್ಯನಿಗೆ ಸಿಡಿಲು ಬಡಿದು ಸಾವಿಗೀಡಾದ ಘಟನೆ ನವಲಗುಂದ ತಾಲೂಕಿನ ಹಾಳಕುಸುಗಲ್ ಗ್ರಾಮದಲ್ಲಿ ನಡೆದಿದೆ.

ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ವಿರುಪಾಕ್ಷಪ್ಪ ಸಣ್ಣದ್ಯಾವಪ್ಪ ಧಾರವಾಡ ಎಂಬುವವರೇ ಸಾವಿಗೀಡಾದ ದುರ್ಧೈವಿಯಾಗಿದ್ದಾರೆ. ಇಳಿಸಂಜೆ ಆರಂಭವಾಗಿದ್ದ ಮಳೆಯ ಸಮಯದಲ್ಲಿ ಸಿಡಿಲು ಬಿದ್ದಿದೆ.
ನವಲಗುಂದ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.