ಧಾರವಾಡ: ಉಪನಗರ ಠಾಣೆ ಪೊಲೀಸರಿಗೆ ಕಾಣದ “ಮಟಕಾ ಫಿನ್” ಹಿಡಿದ ಸಿಸಿಬಿ ಪೊಲೀಸರು…

ಧಾರವಾಡ: ನಗರದಲ್ಲಿ ಅಕ್ರಮವಾಗಿ ಮಟ್ಕಾ ದಂದೇ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ.

ಧಾರವಾಡದ ಮೋಹನ ಬಾನೆ ಹಾಗೂ ಪ್ರಮೋದ ಬೋರಲ್ಲಿ ಎಂಬುವರೇ ನಗರದಲ್ಲಿ ಹಲವು ದಿನಗಳಿಂದ ಅಕ್ರಮವಾಗಿ ಮಟ್ಕಾ ದಂದೇ ನಡೆಸುತ್ತಿದ್ದರು,ನಿನ್ನೇ ಸಪ್ತಾಪುರ ಬಳಿಯಲ್ಲಿ ಮಟ್ಕಾ ದಂದೇ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿಯನ್ನು ಮಾಡಿ.
ಆರೋಪಿಗಳಿಂದ 11520 ನಗದನ್ನು ವಶಕ್ಕೇ ಪಡೆದು ಆರೋಪಿಗಳ ಮೇಲೆ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.