ಧಾರವಾಡದಲ್ಲಿ “ಅಂದರ್-ಬಾಹರ್”- ‘ಕೈ’ ಕಾರ್ಪೋರೇಟರ್ “ಗಣೇಶ ಮುಧೋಳ” ಸೇರಿ ಹಲವರ ಬಂಧನ…

ಧಾರವಾಡ: ನಗರದ ಭೂಸಪ್ಪ ಚೌಕ್ ಬಳಿಯ ಮೇದಾರ ಓಣಿಯಲ್ಲಿ ನಡೆಯುತ್ತಿದ್ದ ಜೂಜಾಟದ ಮೇಲೆ ಸಿಸಿಬಿ ದಾಳಿ ನಡೆದಿದ್ದು, ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ ಸೇರಿ ಹಲವರು ಬಂಧನಕ್ಕೆ ಒಳಗಾಗಿದ್ದಾರೆ.

ಮಹಾನಗರ ಪಾಲಿಕೆಯ 17ನೇ ವಾರ್ಡ್ ಕಾರ್ಪೋರೇಟರ್ ಗಣೇಶ ಮುಧೋಳನ ಸಂಬಂಧಿಕರ ಮನೆಯಲ್ಲಿ ಹೌಸ್ ಗ್ಯಾಂಬ್ಲಿಂಗ್ ನಡೆದ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆದಿದೆ. ದಾಳಿಯ ಕಾಲಕ್ಕೆ ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ಸಿಕ್ಕಿದೆ.
ಈ ಘಟನೆಯ ವೇಳೆ ಹಾಲಿ ಕಾರ್ಪೋರೇಟರ್ ಸೇರಿದಂತೆ ಪ್ರಮುಖರು ತಪ್ಪಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದ್ದು, ಅವರ ಬಂಧನಕ್ಕೂ ಪೊಲೀಸರು ಮುಂದಾಗಿದ್ದಾರೆಂದು ಹೇಳಲಾಗಿದೆ.