“ಆಡೂಣ ಬಾ.. ಕೆಡಸೂಣ ಬಾ…” ಆಟಕ್ಕೀಳಿದ ಕಾಮನ್ ಮ್ಯಾನ್ ಸರಕಾರ… ಬೆಳಿಗ್ಗೆ ಆದೇಶ, ರಾತ್ರಿ ಕ್ಯಾನ್ಸಲ್…!!!

ಬೆಂಗಳೂರು: ಸರಕಾರಿ ಕಚೇರಿಗಳಲ್ಲಿ ವೀಡಿಯೋ ಹಾಗೂ ಭಾವಚಿತ್ರಗಳನ್ನ ತೆಗೆಯುವುದನ್ನ ನಿಷೇಧ ಮಾಡಿ ಆದೇಶ ಹೊರಡಿಸಿದ್ದ ರಾಜ್ಯದ ಕಾಮನ್ ಮ್ಯಾನ್ ಸರಕಾರ, ರಾತ್ರೋರಾತ್ರಿ ಆದೇಶವನ್ನ ಮರಳಿ ಪಡೆದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆಡಳಿತದಲ್ಲಿ ಸರಕಾರದ ಆದೇಶಗಳು ಆಗಾಗ ಆಗುವುದು ಮತ್ತೂ ರದ್ದು ಪಡಿಸುವುದು ಮುಂದುವರೆದಿದೆ. ಸರಕಾರಿ ಕಚೇರಿಗಳಲ್ಲಿ ವೀಡಿಯೋ ಮಾಡುವುದನ್ನ ನಿಷೇಧ ಮಾಡಿ ಆದೇಶ ಹೊರಬಿದ್ದ ತಕ್ಷಣವೇ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಯಿತು. ಇದರಿಂದ ರಾತ್ರಿಯೇ ಎಚ್ಚೆತ್ತ ಸರಕಾರ ಆದೇಶವನ್ನ ಹಿಂದೆ ಪಡೆದಿದೆ.
ಸರಕಾರದ ಆದೇಶದ ಪ್ರತಿಯಲ್ಲಿ ಕನ್ನಡದ ಕಗ್ಗೊಲೆ ಆಗಿದ್ದು, ಹಲವು ಅಭಾಸಗಳು ಕಂಡು ಬಂದಿವೆ. ಈ ಆದೇಶವನ್ನ ಮಧ್ಯರಾತ್ರಿಯಲ್ಲಿ ಮಾಡಿದ್ದಾ ಅಥವಾ ಮದ್ಯದ ರಾತ್ರಿಯಲ್ಲಿ ಮಾಡಿದ್ದಾ ಎಂಬ ಸಂಶಯ ಮೂಡುವಂತಾಗಿದೆ.