“ಕಾರಲ್ಲೇ ಹಾರ್ಟ್ ಅಟ್ಯಾಕ್” ನವಲಗುಂದ ‘ಎಇ ಗುತ್ತಲ’ ಸಾವು…

ನವಲಗುಂದ: ಹುಬ್ಬಳ್ಳಿಯಿಂದ ನವಲಗುಂದ ಪಟ್ಟಣಕ್ಕೆ ಕರ್ತವ್ಯ ನಿರ್ವಹಿಸಲು ಕಾರಲ್ಲಿ ಹೊರಟಿದ್ದ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಇಂಜಿನಿಯರ್ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ತಾಲೂಕಿನ ಕಾಲವಾಡದ ಬಳಿ ಸಂಭವಿಸಿದೆ.

ನವಲಗುಂದ ವಿಭಾಗದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಲೋಕನಾಥ ಉಮೇಶ ಗುತ್ತಲ ಎಂಬ 30 ವರ್ಷದ ಇಂಜಿನಿಯರ್ ಕಾರಲ್ಲಿ ಬರುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್ ಆಗಿದೆ. ಆಗ ಕಾರು ಹೊಲದೊಳಗೆ ನುಗ್ಗಿದ್ದು, ಪೊಲೀಸರು ಬಂದು ತಪಾಸಣೆ ಮಾಡಿದ ವೇಳೆಯಲ್ಲಿ ಘಟನೆಯ ಬಗ್ಗೆ ಮಾಹಿತಿ ಲಭಿಸಿದೆ.

ಎಇ ಗುತ್ತಲ ಅವರು ಏಳು ತಿಂಗಳ ಮಗುವನ್ನು ಹೊಂದಿದ್ದು, ಪತ್ನಿ ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹೋದರನೋರ್ವ ಲಡಾಕ್ ನಲ್ಲಿದ್ದು ಆತನ ಬರುವಿಕೆಗಾಗಿ ಕುಟುಂಬ ಕಾಯುತ್ತಿದೆ.
ಘಟನೆಯ ಬಗ್ಗೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.