Posts Slider

Karnataka Voice

Latest Kannada News

ಕಲಘಟಗಿ ಬಳಿ “ಆಕೆ ಸುಟ್ಟು ಬೂದಿ”ಯಾಗಿದ್ದರೂ ದೂರು ಪಡೆದಿರಲಿಲ್ಲ… ಎಪಿಎಂಸಿ ಠಾಣೆ ಇನ್ಸಪೆಕ್ಟರ್ ಬಾ…ಳಪ್ಪ ಮಂಟೂರ….!

1 min read
Spread the love

ಹುಬ್ಬಳ್ಳಿ: ನಗರದ ಕ್ರೈಂ ಇತಿಹಾಸದಲ್ಲಿಯೇ ದೊಡ್ಡದೊಂದು ಪ್ರಕರಣ ಹೊರ ಬೀಳುತ್ತಿರುವ ಹಾಗೇ, ಅದರಲ್ಲಿನ ಪ್ರಮುಖ ಲೋಪದೋಷಗಳು ಹೊರ ಬೀಳತೊಡಗಿವೆ. ಪೊಲೀಸ್ ಇನ್ಸಪೆಕ್ಟರೊಬ್ಬರ ನಿರ್ಲಕ್ಷ್ಯತನದಿಂದಲೇ ಎರಡನೇಯ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಮೃತ ಇಂದ್ರಾಬಾಯಿ ಪವಾರ

ಕಲಘಟಗಿ ತಾಲೂಕಿನ ಕಾಡನಕೊಪ್ಪದ ಬಳಿ ಸುಮಾರು 58 ವರ್ಷದ ಮಹಿಳೆಯೊಬ್ಬಳನ್ನ ಕೊಲೆ ಮಾಡಿ, ಪೆಟ್ರೋಲ್ ಹಾಕಿ ಸುಟ್ಟು ಹಾಕಲಾಗಿದೆ ಎಂದು ಕಲಘಟಗಿ ಪೊಲೀಸರು ಕಂಡ ಕಂಡ ವಿಚಾರಣೆ ನಡೆಸುತ್ತಿದ್ದರು. ಯಾವುದೇ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ಕೂಡಾ ಇರಲಿಲ್ಲ. ಹಾಗಾಗಿಯೇ ಪೊಲೀಸರು ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಸೋಜಿಗವೆಂದರೆ, ಮತ್ತೊಂದು ಮಹಿಳೆಯನ್ನ ಸುಟ್ಟು ಕೊಲೆ ಮಾಡಿದಾಗಲೇ, ಎರಡು ಪ್ರಕರಣಗಳು ಬಯಲಿಗೆ ಬಂದಿವೆ.

ಕರ್ನಾಟಕವಾಯ್ಸ್.ಕಾಂಗೆ ಲಭಿಸಿರುವ ಮಾಹಿತಿಯ ಪ್ರಕಾರ ಇಂದ್ರಾಬಾಯಿ ಪವಾರ ಕಾಣೆಯಾದ ಬಗ್ಗೆ ಅವರ ಸಂಬಂಧಿಕರು ನವನಗರದ ಎಪಿಎಂಸಿ ಠಾಣೆಗೆ ಹೋಗಿ ತಮ್ಮ ತಾಯಿಯನ್ನ ಹುಡುಕಿಕೊಡಿ ಎಂದು ಕೇಳಿದ್ದಾರೆ. ಆದರೆ, ಎಪಿಎಂಸಿ ಠಾಣೆ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ಪ್ರಕರಣ ದಾಖಲು ಮಾಡಿಕೊಳ್ಳದೇ ದಿನಗಳನ್ನ ನೂಕುತ್ತ ಸಾಗಿದ್ದಾರೆ. ಹಾಗಾಗಿಯೇ, ಕಾಡನಕೊಪ್ಪದ ಬಳಿ ಸಿಕ್ಕ ಮಹಿಳೆಯ ಕೊಲೆ ಪ್ರಕರಣ ನೆನೆಗುದಿಗೆ ಬಿದ್ದಿದೆ.

ದೂರು ಕೊಡಲು ಬಂದಾಗಲೇ ಪ್ರಕರಣ ದಾಖಲು ಮಾಡಿಕೊಂಡಿದ್ದರೇ, ಅದೇ ಪ್ರದೇಶದಲ್ಲಿ ಮತ್ತೊಂದು ಮಹಿಳೆಯನ್ನ ಕೊಲೆ ಮಾಡಿ, ಸುಟ್ಟು ಹಾಕುತ್ತಿರಲಿಲ್ಲವೆಂದು ಹೇಳಲಾಗುತ್ತಿದೆ.

ಇನ್ಸಪೆಕ್ಟರ್ ಬಾಳಪ್ಪ ಮಂಟೂರ ಅವರು ಅಸಹ್ಯ ಭಾಷೆಯನ್ನ ಬಳಸಿ ಸಿಬ್ಬಂದಿಗಳನ್ನ ಮೂದಲಿಸುವುದರಲ್ಲಿಯೇ ಸಮಯ ಕಳೆಯುತ್ತಾರೆ ಹೊರತು, ಇಂತಹ ಪ್ರಕರಣ ಬಂದಾಗ ಎಚ್ಚೆತ್ತುಕೊಳ್ಳುವುದಿಲ್ಲವೆಂದು ಹೇಳಲಾಗುತ್ತಿದೆ.

ಮಹಿಳೆಯ ನಾಪತ್ತೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದರೇ, ಮತ್ತೊಂದು ಕೊಲೆಯನ್ನ ತಪ್ಪಿಸಲು ಸಾಧ್ಯವಾಗುತ್ತಿತ್ತು. ಈ ಬಗ್ಗೆ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ಅವರ ವಿರುದ್ಧ ಪೊಲೀಸ್ ಕಮೀಷನರ್ ಯಾವ ಕ್ರಮ ಜರುಗಿಸುತ್ತಾರೋ ಕಾದು ನೋಡಬೇಕಿದೆ.

ಇನ್ಸಪೆಕ್ಟರ್ ಬಾಳಪ್ಪ ಮಂಟೂರ ಅವರು ಠಾಣೆಯಲ್ಲಿ ಸಿಬ್ಬಂದಿಗಳಿಗೆ ಮುದೊಂದು ಮಾತಾಡಿ, ಅವರು ಹೋದ ಮೇಲೆ ಅಸಭ್ಯವಾಗಿ ಬೈದು ಹೋಗುವುದನ್ನ ಬಿಟ್ಟು “ಸರಕಾರಿ ಕೆಲಸ ದೇವರ ಕೆಲಸ” ಎಂದು ತಿಳಿದುಕೊಳ್ಳುವ ಅವಶ್ಯಕತೆಯಿದೆ ಅಂತಾರೆ ಠಾಣೆಯ ಹಿತ ಬಯಸುವ ಜೀವಗಳು.


Spread the love

Leave a Reply

Your email address will not be published. Required fields are marked *