Karnataka Voice

Latest Kannada News

“ಚಾರ್ಲಿ 777” ಸಿನೇಮಾ ನೋಡಿ ಕಣ್ಣೀರಿಟ್ಟ “ಸಿಎಂ” ಅವರೇ, ‘ನಿಮ್ಮೂರಿನ ಚಾರ್ಲಿ’ಗಳ ಸ್ಥಿತಿ ನೋಡಿ…

Spread the love

ಧಾರವಾಡ: ವಿದ್ಯಾಕಾಶಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಮಾನವ ಎಷ್ಟೊಂದು ಕ್ರೂರಿಯಾಗುತ್ತಿದ್ದಾನೆಂಬುದು ಈ ಮೂಲಕ ಗೊತ್ತಾಗಿದ್ದು, ಪ್ರಾಣಿ ದಯಾ ಸಂಘವೂ ಜೀವಂತವಿದೆಯಾ ಎಂಬ ಪ್ರಶ್ನೆ ಮೂಡುವಂತಾಗಿದೆ.

ಹೌದು.. ಧಾರವಾಡದಲ್ಲಿ ಬೀದಿ ನಾಯಿಗಳನ್ನ ಹಿಡಿದು ಕಾಡಿನೊಳಗೆ ಬಿಟ್ಟು ಬರಬೇಕೆಂಬ ನಿಯಮವಿದ್ದರೂ, ಶ್ವಾನಗಳ ಕಾಲುಗಳನ್ನ ಕಟ್ಟಿ, ಅವುಗಳ ಪ್ರಾಣ ತೆಗೆಯುವ ಪ್ರಯತ್ನಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ ಎಂಬ ಸತ್ಯ ಬಹಿರಂಗಗೊಂಡಿದೆ.

https://youtu.be/HHS_RtrBTYM

ಕೆಲವು ದಿನಗಳ ಹಿಂದಷ್ಟೇ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಚಾರ್ಲಿ 777 ಸಿನೇಮಾ ನೋಡಿ ಕಣ್ಣೀರಿಟ್ಟಿದ್ದರು. ಅದೇ ಕಾರಣಕ್ಕೆ ಚಾರ್ಲಿ ಸಿನೇಮಾಗೆ ಟ್ಯಾಕ್ಸ್ ಪ್ರೀ ಕೂಡಾ ನೀಡಿದ್ದರು. ಆದರೆ, ಅವರದ್ದೆ ತವರು ಜಿಲ್ಲೆಯಲ್ಲಿ ಎಷ್ಟೊಂದು ಕ್ರೌರ್ಯ ಶ್ವಾನಗಳ ಮೇಲೆ ನಡೆಯುತ್ತಿದೆ ಎಂಬುದನ್ನ ಕಣ್ಣು ತೆರೆದು ನೋಡಬೇಕಿದೆ.

ಚಿತ್ರನಟ ರಕ್ಷಿತರಂತವರು ಕೂಡಾ ಇಂತಹ ಅಮಾನವೀಯ ಕೃತ್ಯವನ್ನ ಖಂಡಿಸಬೇಕಿದೆ. ಇಲ್ಲದಿದ್ದರೇ, ನೀವೂ ಕೂಡಾ ಹಣಕ್ಕಾಗಿ ಶ್ವಾನ ಪ್ರೀತಿ ತೋರಿಸಿದ್ರೀ ಎಂದಾಗತ್ತೆ.

ದಿನ ಬೆಳಗಾದರೇ, ನಾವು ಪ್ರಾಣಿ ದಯಾ ಸಂಘದವರು.. ಹಿಂಗೆ- ಹಂಗೆ ಹೇಳುತ್ತ ಕೂಡುವುದಲ್ಲ. ಈ ಥರದ ರಕ್ಕಸ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮವಾಗಬೇಕಿದೆ.. ಅಲ್ಲವೇ..


Spread the love

Leave a Reply

Your email address will not be published. Required fields are marked *