ಹುಬ್ಬಳ್ಳಿಯಲ್ಲಿ “ಗ್ಯಾಂಗ್ ವಾರ್”- ರಾತ್ರೋರಾತ್ರಿ “ಹೆಡಮುರಿಗೆ ಕಟ್ಟಿಟ್ಟ” ಪೊಲೀಸ್ ಕಮೀಷನರ್ ಲಾಬುರಾಮ್….
1 min readಹುಬ್ಬಳ್ಳಿ: ಹಾಲಿ ಶಾಸಕರೋರ್ವರ ಜನ್ಮದಿನದ ಕಾರ್ಯಕ್ರಮವೊಂದರಲ್ಲಿ ನಡೆಯಬೇಕಾಗಿದ್ದ ಅಹಿತಕರ ಘಟನೆಯೊಂದು ರಾತ್ರಿ ಮತ್ತೆ ಮರುಕಳಿಸುವ ಸಾಧ್ಯತೆ ಕಂಡು ಬಂದಿದ್ದೆ ತಡ, ಅಲರ್ಟ್ ಆದ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಗ್ಯಾಂಗ್ ವಾರ್ ನ್ನ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾತ್ರಿ ಯಾವ ಯಾವ ಠಾಣೆಯ ಮುಂಭಾಗದಲ್ಲಿ ಏನೇನು ನಡೀತು… ಮೊದಲ್ಲೊಮ್ಮೆ ವೀಡಿಯೋ ನೋಡಿ ಬಿಡಿ..
ಅಸಲಿ ಕಥೆ ಏನು: ಶಾಸಕ ಪ್ರಸಾದ ಅಬ್ಬಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ ಟೌನ್ ಹಾಲ್ ನಲ್ಲಿ ರಕ್ತದಾನ ಶಿಬಿರ ನಡೆದಿತ್ತಂತೆ. ಅದೇ ಸಮಯದಲ್ಲಿ ಸೆಟ್ಲಮೆಂಟಿನ ಶ್ಯಾಮ್ ಜಾಧವರ ಮಕ್ಕಳ ಸಂಗಡಿಗರು ಹಾಗೂ ಸೂರಿ-ಗಿರಿ ಸಂಗಡಿಗರು ಗುಟುರು ಹಾಕಿದ್ದರಂತೆ. ಅದೇ ಸಮಯದಲ್ಲಿ ಕೆಲವರು ಹಾಕಿ ಸ್ಟಿಕ್, ಬೇಸ್ ಬಾಲ್ ಬ್ಯಾಟ್ ತೆಗೆದುಕೊಂಡು ಬಂದಿದ್ದರಂತೆ. ಆದರೆ, ಇಲ್ಲಿ ಗಲಾಟೆ ಆಗುವುದು ಬೇಡವೆಂದು ಒಂದು ತಂಡ ಅಲ್ಲಿಂದ ತೆರಳಿತ್ತಂತೆ.
ಘಟನೆ ನಡೆದ ರಾತ್ರಿ ಮತ್ತೆ ಒಂದು ಗುಂಪಿನ ಕೆಲವರು ಬೈಕ್ ತೆಗೆದುಕೊಂಡು ಹೋಗಿ, ಇನ್ನೊಂದು ಗುಂಪಿನ ಮನೆಯ ಸುತ್ತಲೂ ಗಿರಕಿ ಹೊಡೆಯಲು ಆರಂಭಿಸಿದ್ದಾರೆ. ಈ ಮಾಹಿತಿ ಪೊಲೀಸ್ ಕಮೀಷನರ್ ಲಾಬುರಾಮ್ ಅವರಿಗೆ ತಲುಪಿದ್ದೆ ತಡ, ತಕ್ಷಣವೇ ಜಾಗೃತರಾಗಿದ್ದಾರೆ.
ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಗೆ ಶ್ಯಾಮ್ ಜಾಧವ ಸೇರಿದಂತೆ ಅಭಿಷೇಕ ಜಾಧವ, ಯಮನೂರ ಎಂಬುವವರನ್ನ, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಗೆ ಸೂರಿ-ಗಿರಿ ಸಹೋದರರನ್ನ ರಾತ್ರೋರಾತ್ರಿ ಕರೆಸಿ, ವಿಚಾರಣೆಯನ್ನ ನಡೆಸಿದ್ದಾರೆ. ಎಸಿಪಿ ಆರ್.ಕೆ.ಪಾಟೀಲ ಹಾಗೂ ಡಿಸಿಪಿ ಸಾಹಿಲ್ ಬಾಗ್ಲಾ ಅವರು, ಎರಡು ತಂಡದವರಿಗೆ ಪೊಲೀಸ್ ಭಾಷೆಯಲ್ಲಿ ಹೇಳಿ ಕಳಿಸಿ, ಮತ್ತೆ ಬರಲು ಹೇಳಿದ್ದಾರಂತೆ.
ನಡೆಯಬಹುದಾಗಿದ್ದ ಗ್ಯಾಂಗ್ ವಾರ್ ನ್ನ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ರಾತ್ರೋರಾತ್ರಿ ತಡೆದು ವಾಣಿಜ್ಯನಗರಿಯ ನೆಮ್ಮದಿಯ ಕಾಪಾಡಿದ್ದಾರೆ.