‘2016ರ ಬ್ಯಾಚಿನ ಪೊಲೀಸ್’ ಕ್ವಾಟರ್ಸ್ ನಲ್ಲೇ ನೇಣಿಗೆ ಶರಣು…

ಮೈಸೂರು: ಉತ್ತರ ಕರ್ನಾಟಕ ಮೂಲದ ಪೊಲೀಸ್ ರೋರ್ವರು ಮಡದಿ ವಾಯುವಿಹಾರಕ್ಕೆ ಹೋದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಲಪುರಿ ಪೊಲೀಸ್ ಕ್ವಾಟರ್ಸನಲ್ಲಿ ನಡೆದಿದೆ.

2016ರ ಬ್ಯಾಚಿನ ಪರಸಪ್ಪ ಕೊಣ್ಣೂರು ಎಂಬುವವರೇ ನೇಣಿಗೆ ಶರಣಾದ ಪೊಲೀಸ್ ಆಗಿದ್ದು, ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರೆಂದು ಗೊತ್ತಾಗಿದೆ.
ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪರಸಪ್ಪ, ಬೆಳಗಿನ ಜಾವ ಪತ್ನಿ ವಾಯುವಿಹಾರಕ್ಕೆ ಹೋದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾರೆ.
ಘಟನೆಯು ನಜರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಾವಿಗೆ ನಿಖರವಾದ ಕಾರಣವೇನು ಎಂಬುದು ತಿಳಿದು ಬಂದಿಲ್ಲ.