Posts Slider

Karnataka Voice

Latest Kannada News

ಶಾಲೆಗಳನ್ನ ಆರಂಭಿಸಬೇಕಾ: ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಸರಕಾರಕ್ಕೇಳಿದ್ದೇನು ಗೊತ್ತಾ….!?

1 min read
Spread the love

ಹುಬ್ಬಳ್ಳಿ: ಮೇ 16 ರಿಂದ ಶಾಲೆಗಳನ್ನ ಆರಂಭಿಸಲು ಮುಂದಾಗಿರುವ ಸರಕಾರದ ನಿರ್ಣಯವನ್ನ ಪರಾಮರ್ಶೆ ನಡೆಸಬೇಕು. ಯಾಕೆ ನಡೆಸಬೇಕಾದ ಅವಶ್ಯಕತೆ ಇದೆ ಎಂಬುದನ್ನ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹೇಳಿರುವುದನ್ನ, ಸರಕಾರ ಆಲಿಸಬೇಕಿದೆ.

ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಅವರ ಹೇಳಿಕೆ ಇಲ್ಲಿದೆ ನೋಡಿ…

ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೋಂದಾಯಿತ ರಾಜ್ಯ ಘಟಕ ಹುಬ್ಬಳ್ಳಿಯಿಂದ ರಾಜ್ಯಾಧ್ಯಕ್ಷ ನಾದ ನಾನು ಅಶೋಕ ಎಮ್ ಸಜ್ಜನ್ ಈ ಮೂಲಕ ಘನ ಸರ್ಕಾರದ ಮುಖ್ಯಮಂತ್ರಿಗಳವರಿಗೆ ಹಾಗೂ ಶಿಕ್ಷಣ ಸಚಿವರಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ನಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಎಲ್ಲಾ ಶಿಕ್ಷಕರನ್ನು ಪ್ರತಿನಿಧಿಸುವ ಶಿಕ್ಷಕ ಪ್ರತಿನಿಧಿ ಮಾನ್ಯರಿಗೆ ಈ ಮೂಲಕ ವಿನಮ್ರವಾಗಿ ಬಿನ್ನವತ್ತಳೆ ಸಲ್ಲಿಸುತ್ತಿರುದೇನಂದರೆ
ಈಗಾಗಲೇ ರಾಜ್ಯದಲ್ಲಿ ದಿನಾಂಕ :16-05-2022 ರಿಂದ ಶಾಲೆಗಳನ್ನು ಪ್ರಾರಂಭ ಆಗುವುದೆಂದು ಶಿಕ್ಷಣ ಸಚಿವರು ಆದೇಶವನ್ನು ಹೊರಡಿಸಿದ್ದಾರೆ.ಆದರೆ ಈ ದಿಸೆಯಲ್ಲಿ ವಿವಿಧ ಶಿಕ್ಷಕರ ಸಂಘಟನೆಗಳು ವಿವಿಧ ಜನ ನಾಯಕರು ಸರಕಾರಕ್ಕೆ ಹಾಗೂ ಶಿಕ್ಷಣ ಸಚಿವರಿಗೆ ಲಿಖಿತ ರೂಪದಲ್ಲಿ ಸದರಿ ಬೇಸಿಗೆ ರಜೆಯನ್ನು ಮುಂದುವರಿಸಬೇಕೆಂದು ಮನವಿ ಸಲ್ಲಿಸಿರುತ್ತಾರೆ.
ಸನ್ಮಾನ್ಯ ಶಿಕ್ಷಣ ಸಚಿವರೇ ತಾವುಗಳು ಶಾಲೆಗಳನ್ನು ಪ್ರಾರಂಭಿಸುವುದನ್ನ, ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಸ್ವಾಗತಿಸುತ್ತೇವೆ.ಆದರೆ ತಾವುಗಳು ಇಂತಹ ಬಿಸಿಲಿನ ತಾಪಮಾನ ಇರುವ ಸಂದರ್ಭದಲ್ಲಿ ,ವಿಪರೀತವಾಗಿ ಸುರಿಯುತ್ತಿರುವ ಮಳೆಯ ಸಂದರ್ಭದಲ್ಲಿ ಶಾಲೆಗಳನ್ನು ಪ್ರಾರಂಭಿಸಬೇಕಾಗುವ ಮೊದಲು ಶಿಕ್ಷಣ ತಜ್ಞರ ಹಾಗೂ ಮಕ್ಕಳ ತಜ್ಞರ ವರದಿಯನ್ನು ಪಡೆದು ಶಾಲೆಗಳನ್ನು ಪ್ರಾರಂಭಿಸಿರಿ.
ಹಾಗೂ ರಾಜ್ಯದ ಮೂಲೆ ಮೂಲೆಗಳಲ್ಲಿರುವ ಗ್ರಾಮೀಣ ಪ್ರದೇಶದ ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿದ್ದು ಶೀಟ್ ಹೊಂದಿರುವ ಶಾಲಾ ಕಟ್ಟಡಗಳು ವಿವಿಧ ರೂಪದ ಶಾಲಾ ಕಟ್ಟಡಗಳು ಗಾಳಿ-ಮಳೆಗೆ ಶಿಥಿಲಗೊಂಡಿದ್ದು ಅವುಗಳು ದುರಸ್ತಿ ಇಲ್ಲದೆ ಅಪಾಯಕಾರಿ ಹಂತದಲ್ಲಿದೆ ಹಾಗೂ ಆ ಕಟ್ಟಡಗಳಲ್ಲಿ ವಿಷಜಂತುಗಳು ಸೇರಿಕೊಂಡಿರಬಹುದು.
ಕಾರಣ ಈ ಕೂಡಲೇ ಕಂದಾಯ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಶಾಲಾ ಕಟ್ಟಡಗಳನ್ನು ಪರಿಶೀಲನೆ ಮಾಡಿಸಿ ದುರಸ್ತಿ ಮಾಡಿಸಿ ಸುಸಜ್ಜಿತ ಕಟ್ಟಡ ಎಂದು ಪ್ರಮಾಣ ಪತ್ರ ಪಡೆಯುವುದರ ಮೂಲಕ ಶಾಲಾ ಪ್ರಾರಂಭಕ್ಕೆ ಅನುವು ಮಾಡಿಕೊಡಬೇಕೆಂದು ಸನ್ಮಾನ್ಯ ಘನ ಸರ್ಕಾರಕ್ಕೆ ವಿನಂತಿಸಿಕೊಳ್ಳುತ್ತೇವೆ.


Spread the love

Leave a Reply

Your email address will not be published. Required fields are marked *