ಹುಬ್ಬಳ್ಳಿಯ “ಸ್ಮಾರ್ಟ್ ಸಿಟಿಯ ಖರಾಬ್ ವರ್ಕ್” ಬೆಳ್ಳಂಬೆಳಿಗ್ಗೆ ಉರುಳಿಬಿದ್ದ ಪ್ಲೈ ಓವರ್ ಫಿಲ್ಲರ್…

ಹುಬ್ಬಳ್ಳಿ: ವಾಣಿಜ್ಯನಗರಿಯ ಸ್ಮಾರ್ಟ್ ಸಿಟಿಯ ವರ್ಕ್‌ಗಳು ಹಲವು ಆವಾಂತರಗಳನ್ನ ಸೃಷ್ಟಿ ಮಾಡುತ್ತಿದ್ದು, ಇಂದು ಬೆಳ್ಳಂ ಬೆಳಿಗ್ಗೆ ದೊಡ್ಡದೊಂದು ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ಹುಬ್ಬಳ್ಳಿಯ ವಾಣಿ ವಿಲಾಸ್ ಸರ್ಕಲ್ ಬಳಿಯ ಪ್ಲೈ ಓವರ್ ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಇಂತಹ ಸಮಯದಲ್ಲಿ ಪ್ಲೈ ಓವರ್ ನ ಫಿಲ್ಲರ್ ವೊಂದು ಬಿದ್ದು, ಓರ್ವನಿಗೆ ತೀವ್ರ ಥರದ ಗಾಯಗಳಾಗಿವೆ.
ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕಾಮಗಾರಿಯ ವ್ಯವಸ್ಥಾಪಕರನ್ನ ವಿಚಾರಣೆಗೆ ಕರೆದುಕೊಂಡು ತೆರಳಿದ್ದಾರೆ. ಪ್ಲೈ ಓವರ್ ಕಾಮಗಾರಿಯಲ್ಲಿ ತಾಂತ್ರಿಕ ಮೇಲುಸ್ತುವಾರಿ ಇಲ್ಲದೇ ಇರುವುದು ಕಂಡು ಬಂದಿದೆ.