ಹುಬ್ಬಳ್ಳಿಯ ನರಹಂತಕನನ್ನ ವಶಕ್ಕೆ ಪಡೆದ ಬೆಳಗಾವಿ ಪೊಲೀಸ್…!
1 min readಹುಬ್ಬಳ್ಳಿ: ಚಿಲ್ಲರ ಹಣಕ್ಕಾಗಿ ರಸ್ತೆಯಲ್ಲಿಯೇ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನ ಬಂಧಿಸಿದ್ದ, ನರಹಂತಕನನ್ನ ಬೆಳಗಾವಿ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಹುಬ್ಬಳ್ಳಿಯ ಶಹರ ಠಾಣೆಯ ಪೊಲೀಸರು ನಗರದ ಕೃಷ್ಣಭವನದ ಬಳಿ ನಡೆದ ಮಹಿಳೆಯ ಕೊಲೆ ಪ್ರಕರಣ ಬೇಧಿಸಿದ ನಂತರ, ಆರೋಪಿಯ ನಿಜ ಬಣ್ಣ ಬಯಲಾಯಗಿತ್ತು. ತದನಂತರವೂ ಈತ ಹಲವು ಕೊಲೆ ಮಾಡಿದ್ದನೆಂಬ ಮಾಹಿತಿಯನ್ನ ಪೊಲೀಸರು ಕಲೆ ಹಾಕಿದ್ದರು.
ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ತನಿಖೆಯನ್ನ ಕೈ ಬಿಟ್ಟು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ತದನಂತರ ಬೆಳಗಾವಿಯ ಮಾಳಮಾರುತಿ ಠಾಣೆಯ ಪೊಲೀಸರು ವಶಕ್ಕೆ ಪಡೆದು, ನಗರದಲ್ಲಿ ನಡೆದಿರುವ ಕೊಲೆಯ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಎರಡು ಹಾಗೂ ಬೆಳಗಾವಿಯಲ್ಲೂ ಎರಡು ಕೊಲೆ ಮಾಡಿರುವುದನ್ನ ಆರೋಪಿ ಒಪ್ಪಿಕೊಂಡಿದ್ದಾನೆಂಬ ಮಾಹಿತಿ ಸಿಕ್ಕಿದ್ದು, ಪೊಲೀಸರು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ.