ಸಾವಿತ್ರಿಯ ದಾರಿಹಿಡಿದ ಮಲ್ಲಪ್ಪ: 10ಗಂಟೆಯ ಅಂತರದಲ್ಲಿ ಕೊನೆಯುಸಿರೆಳೆದ ಪ್ರೇಮಿಗಳು…

ಹುಬ್ಬಳ್ಳಿ: ನವಲಗುಂದ ಪಟ್ಟಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳಿಬ್ಬರು 10 ಗಂಟೆಯ ಅಂತರದಲ್ಲಿ ಸಾವಿನಲ್ಲೂ ಒಂದಾಗಿರುವ ಘಟನೆ ಕಿಮ್ಸನಲ್ಲಿ ಸಂಭವಿಸಿದೆ.

ತಡಹಾಳ ಮೂಲದ ಸಾವಿತ್ರಿ ನರಗುಂದ ಹಾಗೂ ಮಲ್ಲಪ್ಪ ಮಾದರ ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಿದ್ದರಂತೆ. ಆದರೆ, ಸಾವಿತ್ರಿಯ ಮದುವೆಯನ್ನ ಬೇರೆಯವರೊಂದಿಗೆ ಫಿಕ್ಸ್ ಮಾಡಿದ ಹಿನ್ನೆಲೆಯಲ್ಲಿ ಪ್ರೇಮಿಗಳು ನವಲಗುಂದ ಪಟ್ಟಣದಲ್ಲಿ ವಿಷ ಸೇವಿಸಿ, ತೀವ್ರವಾಗಿ ಅಸ್ವಸ್ಥಗೊಂಡಿದ್ದರು.
ಗಂಭೀರವಾಗಿದ್ದ ಇಬ್ಬರನ್ನೂ ಹುಬ್ಬಳ್ಳಿಯ ಕಿಮ್ಸಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಕಳೆದ ರಾತ್ರಿ ಸಾವಿತ್ರಿ ಸಾವಿಗೀಡಾಗಿದ್ದಳು. ಇದೀಗ ಮಲ್ಲಪ್ಪನೂ ಸಾವಿಗೀಡಾಗಿದ್ದು, ಪ್ರೇಮಿಗಳಿಬ್ಬರು ಸಾವಿನಲ್ಲೂ ಒಂದಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.