ಧಾರವಾಡದಲ್ಲಿ ಹಗಲು ಮನೆಗಳ್ಳತನ: ಆರೋಪಿ “ಗವಿಶಿದ್ದಪ್ಪ” ಬಂಧನ- ಚಿನ್ನ ಸಿಕ್ತಂತೆ, ಹಣ ಎಲ್ಲೋಯ್ತೋ…!?
1 min readಧಾರವಾಡ: ಮನೆಯಲ್ಲಿ ಯಾರೂ ಇಲ್ಲದ್ದನ್ನ ನೋಡಿ ಬಾಗಿಲು ಮುರಿದು ಇಬ್ಬನೇ ನುಗ್ಗಿ ನಗ-ನಗದು ದೋಚಿಕೊಂಡು ಪರಾರಿಯಾಗಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನ ಗವಿಶಿದ್ದಪ್ಪ ಅಲಿಯಾಸ್ ಶಿವಣ್ಣ ಕಣಕೇರಿ ಎಂದು ಗುರುತಿಸಲಾಗಿದೆ. ಧಾರವಾಡ ಚಾಲುಕ್ಯ ಬಡಾವಣೆಯಲ್ಲಿನ ಕಳ್ಳತನ ಪ್ರಕರಣದಲ್ಲಿ ಆರೋಪಿ 4 ತೊಲೆ ಚಿನ್ನ ಹಾಗೂ ಒಂದು ಲಕ್ಷ ರೂಪಾಯಿ ಲೂಟಿ ಮಾಡಿದ್ದ.
ಇದೀಗ ಬಂಧಿತ ಆರೋಪಿ ಗವಿಶಿದ್ದಪ್ಪನಿಂದ 120 ಗ್ರಾಂ (12ತೊಲೆ) ಚಿನ್ನವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ, ಹಣವನ್ನ ವಶಕ್ಕೆ ಪಡೆದಿಲ್ಲ. ಈ ಬಗ್ಗೆ ಯಾವುದೇ ಮಾಹಿತಿಯನ್ನೂ ಪೊಲೀಸರು ನೀಡಿಲ್ಲ. ಆರೋಪಿ ಸಿಕ್ಕು ಚಿನ್ನವಷ್ಟೇ ಸಿಗತ್ತೆ, ಹಣ ಸಿಗೋದಿಲ್ಲವೆಂಬುದು ಈ ಮೂಲಕ ಬೆಳಕಿಗೆ ಬಂದಿದೆ.
ಹಲವು ಬಾರಿ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಆರೋಪಿಯ ಹೆಸರನ್ನ ಹೇಳುವುದಿಲ್ಲ, ಮತ್ತೂ ಪ್ರೆಸ್ ನೋಟಲ್ಲೂ ಹಾಕುವುದಿಲ್ಲ. ಆದರೆ, ವಿದ್ಯಾಗಿರಿ ಠಾಣೆ ಪೊಲೀಸರು ಆರೋಪಿಯ ಹೆಸರನ್ನೂ ಹಾಕಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ. ಪೊಲೀಸ್ ಕಮೀಷನರ್ ಲಾಬುರಾಮ್ ಅವರೇ, ಇಷ್ಟು ದಿನ ಬೇರೆ ಹೇಳಿಕೊಂಡು ಬಂದರಾ…