ಖಾಸಗಿ ಬಸ್ ಪಲ್ಟಿ- ವಿದ್ಯಾರ್ಥಿಗಳು ಸೇರಿ 6 ಸಾವು, 25ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಿತಿ ಅಯೋಮಯ..

ತುಮಕೂರು: ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಉರುಳಿ ಬಿದ್ದ ಘಟನೆ ತುಮಕೂರಿನ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ನಡೆದಿದೆ.

ಘಟನೆಯಲ್ಲಿ ವಿದ್ಯಾರ್ಥಿಗಳು ಸೇರಿ 6 ಜನರ ಸಾವಾಗಿದ್ದು, 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ರಸ್ತೆಯುದ್ದಕ್ಕೂ ರಕ್ತಸಿಕ್ತ ದೇಹಗಳು ಬಿದ್ದಿದ್ದು, ಸಾವಿಗೀಡಾದವರು ಬಹುತೇಕ 25 ವಯಸ್ಸಿನ ಒಳಗಿನವರಾಗಿದ್ದಾರೆ.
ವೈ.ಎನ್ ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ಸಿನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರೆಂದು ಹೇಳಲಾಗಿದ್ದು, ಕಿಡಕಿಯ ಬಳಿ ಕೂತವರೇ ಹೆಚ್ಚಾಗಿ ಸಾವಿಗೀಡಾಗಿದ್ದಾರೆಂದು ಗೊತ್ತಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದ ಹಾಗೇ ಬಸ್ಸಿನಲ್ಲಿ ಸಿಕ್ಕವರನ್ನ ಹೊರಗೆ ತೆಗೆದು ಆಸ್ಪತ್ರೆಗೆ ರವಾನೆ ಮಾಡುತ್ತಿದ್ದು, ಮೃತರ ಸಂಬಂಧಿಕರು ರಸ್ತೆಯಲ್ಲಿ ಆಕ್ರಂದನ ಮುಗಿಲು ಮುಟ್ಟುತ್ತಿದೆ.