ನವಲಗುಂದ ಶ್ರೀ ರಾಮಲಿಂಗೇಶ್ವರ ‘ಕಾಮದೇವನ’ ದರ್ಶನ ಪಡೆದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ…

ನವಲಗುಂದ: ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ಕಾಮದೇವರ ದರ್ಶನವನ್ನ ಸಚಿವ ಶಂಕರ ಪಾಟೀಲಮುನೇನಕೊಪ್ಪ ಶುಕ್ರವಾರ ಪಡೆದು, ಭಕ್ತರ ಬಯಕೆಯನ್ನ ದೇವನು ಈಡೇರಿಸುವಂತೆ ಪ್ರಾರ್ಥಿಸಿದರು.
ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಿಂದ ನೇರವಾಗಿ ನವಲಗುಂದಕ್ಕೆ ಆಗಮಿಸಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ಭಗವಂತ ಎಲ್ಲರ ಬಯಕೆಯನ್ನ ಈಡೇರಿಸುವಂತೆ ಕೇಳಿಕೊಂಡರು.
ಕಾಮಣ್ಣನಿಗೆ ಕಷ್ಟವನ್ನ ಭಕ್ತರು ಸಮರ್ಪಣೆ ಮಾಡುತ್ತಾರೆ. ಹಾಗಾಗಿ ಅವರ ಬೇಡಿಕೆಗಳು ಈಡೇರುತ್ತವೆ. ಇದು ಐತಿಹಾಸಿಕ ಪ್ರಸಂಗ ಎಂದರು.