ಕಳ್ಳತನ ಮಾಡಿದ “ಅರ್ಧ ಗಂಟೆಯಲ್ಲೇ” ಆರೋಪಿಗಳ ಹೆಡಮುರಿಗೆ ಕಟ್ಟಿದ ಕಸಬಾಪೇಟೆ ಠಾಣೆ ಪೊಲೀಸರು….!

ಹುಬ್ಬಳ್ಳಿ: ನಗರದ ಕಸಬಾಪೇಟೆಯ ಗೋಡೌನವೊಂದರಲ್ಲಿ ಲಕ್ಷಾಂತರ ರೂಪಾಯಿಯ ಸಿಸಿಟಿವಿ ಕ್ಯಾಮರಾ ಹಾಗೂ ಹಣವನ್ನ ದೋಚಿಕೊಂಡು ಹೋಗಿದ್ದ ಆರೋಪಿಗಳನ್ನ ದೂರು ಬಂದ ಅರ್ಧ ಗಂಟೆಯಲ್ಲಿ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಸಬಾಪೇಟೆಯಲ್ಲಿನ ಕಬೀರ ಎಂಬುವವರ ಮಾಲಿಕತ್ವದ ಬಡೇಸೋಪಿನ ಪ್ಯಾಕ್ಟರಿಯ ಕಿಡಕಿಯ ಗ್ರಿಲ್ ಮುರಿದು ಒಳನುಗ್ಗಿದ ಕಳ್ಳರು, ಸುಮಾರು 17 ಸಿಸಿಟಿವಿ ಕ್ಯಾಮರಾ ಹಾಗೂ 42 ಸಾವಿರ ರೂಪಾಯಿಯನ್ನ ದೋಚಿಕೊಂಡು ಹೋಗಿದ್ದರು.
ಕಸಬಾಪೇಟೆ ಠಾಣೆಗೆ ಬಂದು ಕಬೀರ ದೂರು ನೀಡಿದ ಅರ್ಧ ಗಂಟೆಯಲ್ಲಿಯೇ ಸೋನಿಯಾಗಾಂಧಿನಗರ ಮತ್ತು ದಿವಾನಅಲಿ ದರ್ಗಾದ ಬಳಿಯಲ್ಲಿನ ಇಬ್ಬರು ಆರೋಪಿಗಳನ್ನ ಬಂಧನ ಮಾಡಿದ್ದಾರೆ.
ಕಸಬಾಪೇಟೆ ಠಾಣೆ ಇನ್ಸಪೆಕ್ಟರ್ ಅಡಿವೆಪ್ಪ ಬನ್ನಿ ನೇತೃತ್ವದ ತಂಡದ ಕಾರ್ಯಕ್ಷಮತೆ ಈ ಮೂಲಕ ಕಂಡು ಬಂದಿದ್ದು, ಆರೋಪಿಗಳಿಂದ ಕದ್ದು ಮಾಲನ್ನ ಪತ್ತೆ ಹಚ್ಚುತ್ತಿದ್ದಾರೆ.