ಹುಬ್ಬಳ್ಳಿಯಲ್ಲಿ ರೇಲ್ವೆಗೆ ತಲೆ ಕೊಟ್ಟ ದಂಪತಿಗಳು…

ಹುಬ್ಬಳ್ಳಿ: ರೇಲ್ವೆ ನಿಲ್ದಾಣದ ಕೂಗಳತೆ ದೂರದಲ್ಲಿಯೇ ದಂಪತಿಗಳೂ ರೇಲ್ವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕೆಲವೇ ಸಮಯದ ಹಿಂದೆ ಬೆಳಕಿಗೆ ಬಂದಿದೆ.

ಸುಮಾರು 35 ರಿಂದ 40 ವಯಸ್ಸಿನ ಮಹಿಳೆ ಹಾಗೂ 45ರಿಂದ 50 ವಯಸ್ಸಿನ ಪುರುಷ ಸಾವಿಗೀಡಾಗಿದ್ದು, ದಂಪತಿಗಳು ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದ ಹಾಗೇ ಸ್ಥಳಕ್ಕೆ ತೆರಳಿದ ರೇಲ್ವೆ ಠಾಣೆಯ ಪೊಲೀಸರು ಶವಗಳನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದು, ಸಾವಿಗೀಡಾಗಿರುವ ದಂಪತಿಗಳ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.