Posts Slider

Karnataka Voice

Latest Kannada News

‘ಸಂಪಿಗೆ’ನಗರದಲ್ಲಿ ‘ಕಂಪು’ ಮೂಡಿಸಿದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ…!

1 min read
Spread the love

ಆಯುಕ್ತರ ಪೋನ್ ಕರೆ ಎನ್ಎಸ್ಎಸ್ ವಿದ್ಯಾರ್ಥಿಗಳು ಪುಲ್ ಖುಷ್… ಧಾರವಾಡ ಸಂಪಿಗೆನಗರ ಸ್ವಚ್ಚತೆಗೆ ವಿನೂತನ ಪ್ರಯತ್ನಕ್ಕೆ ಕೈಹಾಕಿದ ಬಸವರಾಜ ಕೊರವರ

ಧಾರವಾಡ: ಕೆ.ಎಚ್.ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ವಿದ್ಯಾಗಿರಿ, ಧಾರವಾಡ ಸಹಯೋಗದೊಂದಿಗೆ ರಾಜ್ಯ ಮಟ್ಟದ ಅಂತರ್ ಪಾಲಿಟೆಕ್ನಿಕ್ ರಾಷ್ಟ್ರೀಯ ಸೇವಾ ಯೋಜನೆ ಶಿಬಿರವನ್ನು ಸಂಪಿಗೆನಗರ ಡಬಲ್ ರಸ್ತೆಯಲ್ಲಿ 120  ವಿದ್ಯಾರ್ಥಿಗಳು ಎಲ್ಲ ಜಿಲ್ಲೆಯಿಂದ ಬಂದಿದ್ದು  ಹಾಗೂ ಬಡಾವಣೆಯ ನಿವಾಸಿಗಳು ಸ್ವಚ್ಚತೆ ಮಾಡಿದರು.

 ಮಹಾನಗರ ಪಾಲಿಕೆ ಆಯುಕ್ತರು ಡಾ.ಗೋಪಾಲಕೃಷ್ಣ ಅವರು ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣದಿಂದ ಬರಲಾಗದೇ ಪೋನ್ ಮುಖಾಂತರ ವಿದ್ಯಾರ್ಥಿಗಳಿಗೆ ಹಾಗೂ ಬಡಾವಣೆಯ ನಿವಾಸಿಗಳಿಗೆ ಸ್ವಚ್ಚತೆ ಕಾರ್ಯದ ಬಗ್ಗೆ ಸಲಹೆ ನೀಡಿ ಸ್ವಚ್ಚತಾ ಕಾರ್ಯಕ್ಕೆ ಹರುಷ ವ್ಯಕ್ತ ಪಡಿಸಿದರು.

ಸ್ವಚ್ಚತಾ ಕಾರ್ಯಕ್ಕೆ ಶ್ರೀ ಬಸವರೆಡ್ಡಿ ವಿದ್ಯಾ ಸಂಸ್ಥೆ ಅಧ್ಯಕ್ಷ ಶಂಕರ ಬಸವರೆಡ್ಡಿ, ಜನ ಜಾಗೃತಿ ಸಂಘ, ಅಧ್ಯಕ್ಷ ಬಸವರಾಜ ಕೊರವರ ಅವರು ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಹಾಗೂ ವಾಹನ ವ್ಯವಸ್ಥೆ ಮಾಡಿದ್ದರು. ಹಿರಿಯ ನಾಗರಿಕರು ವಿದ್ಯಾರ್ಥಿಗಳನ್ನು ಅತ್ಯಂತ ಖುಷಿಯಿಂದ ಕರೆದುಕೊಂಡು ಹೋಗಿ ತಮ್ಮ ತಮ್ಮ ಬಡಾವಣೆಯ ಸ್ವಚ್ಚತೆ ಮಾಡಿಸಿದರು.

ಮಹಾನಗರ ಪಾಲಿಕೆ ಸಿಬ್ಬಂದಿಗಳು ಮಾತ್ರ ಇತ್ತ ಬರದೇ ಇದ್ದದ್ದು ಎಲ್ಲರಿಗೂ ಆಶ್ಚರ್ಯಕರವಾಯಿತು. ಕಸ ತುಂಬಲು ಒಂದು ಟ್ರಾಕ್ಟರ್ ಮಾತ್ರ ಬಂದಿತ್ತು. ಪಾಲಿಕೆಯ ಹಿರಿಯ ಅಧಿಕಾರಿಗಳು ಯಾವುದೇ ಪೋನ್ ಕರೆಗೆ ಸಮಂಜಸ ಉತ್ತರ ಕೊಡಲಿಲ್ಲ. ಇನ್ನಾದರೂ ಮಹಾನಗರ ಪಾಲಿಕೆ ಸ್ವಚ್ಚತಾ ಕಾರ್ಯದಲ್ಲಿ ಸಾರ್ವಜನಿಕರ ಜೊತೆಯಲ್ಲಿ ಕೈಜೋಡಿಸುವ ಕಾರ್ಯವಾಗಲಿ ಎಂದು ಬಸವರಾಜ ಕೊರವರ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ವಸಂತ್ ಎನ್ ದೇಸಾಯಿ, ರಾಷ್ಟ್ರಪತಿ ಪ್ರಶಸ್ತಿ ವಿಜೇತ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಸುರೇಶಪ್ಪ ಕೆ ಸಜ್ಜನ, ಕೆ.ಎಚ್.ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆ ಎನ್ ಎಸ್ ಎಸ್ ಅಧಿಕಾರಿಗಳು ವಸಂತ ಎಸ್ ಐಹೋಳೆ, ಈರಪ್ಪ ಪತ್ತಾರ,  ಎನ್.ಎಮ್.ವಾಣಿ ಚನ್ನಸಂದ್ರ,  ಬಿರಾದಾರ ಹುಬ್ಬಳ್ಳಿ, ಬಾಬಾಜಾನ್ ದರೂರ, ಕುಮಾರ ಅಗಸಿಮನಿ, ರಾಮಚಂದ್ರ, ಕೊಡಗ, ಶಿವಾನಂದ ಬೀಳಗಿ, ಬಸವರಾಜ್ ಗಡೇಕರ್, ಪ್ರೊ.ಕೊಟ್ಟರೇಶ ಇನ್ನಿತರರು ಇದ್ದರು.


Spread the love

Leave a Reply

Your email address will not be published. Required fields are marked *