ಹುಬ್ಬಳ್ಳಿಯ ವಿದ್ಯಾನಗರದಲ್ಲಿ “ಚಿಗರಿಯ ರಾಕ್ಷಸ ರೂಪ ದರ್ಶನ”- ಪ್ರಾಣಾಪಾಯದಿಂದ ಪಾರು….!

ಹುಬ್ಬಳ್ಳಿ: ಅವಳಿನಗರದ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಗಳ ಹಾವಳಿಯನ್ನ ತಡೆದುಕೊಳ್ಳುವುದು ದುಸ್ತರವಾಗಿದ್ದು, ಇಂದು ಕೂಡಾ ಸಿಗ್ನಲ್ ಜಂಪ್ ಮಾಡಿ ಕಾರಿಗೆ ಡಿಕ್ಕಿ ಹೊಡೆದ ಘಟನೆ ವಿದ್ಯಾನಗರದ ಬಳಿ ಸಂಭವಿಸಿದೆ.

ಉಣಕಲ್ ದಿಂದ ಬಂದು ವಿದ್ಯಾನಗರದ ಕಾಲೇಜು ಮುಂಭಾಗದಿಂದ ಮರಳಿ ಹೋಗುವ ಸಮಯದಲ್ಲಿ ಸಿಗ್ನಲ್ ಹಾಕದೇ ಇದ್ದರೂ, ಬಿಆರ್ ಟಿಎಸ್ ಚಿಗರಿ ಬಸ್ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಇದಕ್ಕೊಂದು ಅಂತ್ಯವೇ ಇಲ್ಲದಂತಾಗಿದೆ.
ಚಿಗರಿ ಬಸ್ ಚಾಲನೆ ಮಾಡುವ ಚಾಲಕರ ಮನಸ್ಥಿತಿಯೇ ಬೇರೆಯಿದೆ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಸಿಗ್ನಲ್ ಬಂದಾಗಲೂ, ಬಸ್ಸಿನ ವೇಗ ಕಡಿಮೆಯಾಗಿರುವುದಿಲ್ಲ.
ಈ ಘಟನೆಯಿಂದಲಾದರೂ, ಪೊಲೀಸರು ಇವರಿಗೆ ತಕ್ಕ ಪಾಠವನ್ನ ಕಲಿಸುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.