ಮಹಿಳೆ ಕೂಡಿ ಹಾಕಿ, ಹಲ್ಲೆ, ಚಿನ್ನಾಭರಣ ಲೂಟಿ: ಶಕ್ತಿರಾಜ್ ದಾಂಡೇಲಿ, ರಾಹುಲ್ ಮೇಲೆ FIR…

ಹುಬ್ಬಳ್ಳಿ: ಅಪಾರ್ಟಮೆಂಟಿನಲ್ಲಿನ ಮನೆಯೊಂದನ್ನ ಖಾಲಿ ಮಾಡುವಂತೆ ಮಹಿಳೆಯ ಮೇಲೆ ಹಲ್ಲೆ ಮಾಡಿ, ಮೈಮೇಲಿದ್ದ ಚಿನ್ನಾಭರಣ ಲೂಟಿ ಮಾಡಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ಉತ್ತರಕನ್ನಡದ ಬಾಲಕೃಷ್ಣ, ಶಕ್ತಿರಾಜ ದಾಂಡೇಲಿ, ರಾಹುಲ ಸೇರಿದಂತೆ 10ಕ್ಕೂ ಹೆಚ್ಚು ಜನರು ಕೂಡಿಕೊಂಡು ಹಲ್ಲೆ ಮಾಡಲಾಗಿದೆ ಎಂದು ಮಹಿಳೆಯು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಫೆಬ್ರುವರಿ 4ರಂದು ಏಕಾಏಕಿ ಮನೆಗೆ ನುಗ್ಗಿರುವ ಗುಂಪು ಎರಡೇ ಗಂಟೆಯಲ್ಲಿ ಮನೆಯನ್ನ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದಾರೆಂದು ದೂರು ದಾಖಲಾಗಿದೆ.
ಮಹಿಳೆಯನ್ನ ಬೆಡ್ ರೂಂನಲ್ಲಿ ಕೂಡಿ ಹಾಕಿ, ಮೊಬೈಲ್ ಕಿತ್ತುಕೊಂಡು ಹೊಟ್ಟೆಗೆ ಒದ್ದು ಮನೆಯನ್ನ ಖಾಲಿ ಮಾಡುವಂತೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.