ಮೊರಬದಲ್ಲಿ ಶ್ರೀನಿವಾಸರೆಡ್ಡಿ ಮಾಸ್ತಿ ವಿಷ ಸೇವಿಸಿ ಆತ್ಮಹತ್ಯೆ…

ನವಲಗುಂದ: ವಿಪರೀತ ಸಾಲವನ್ನು ಮಾಡಿಕೊಂಡಿದ್ದ ಯುವ ರೈತನೊಬ್ಬ ಸಾಲವನ್ನು ತೀರಿಸುವ ದಾರಿ ಕಾಣದೆ ಮನೆಯಲ್ಲಿದ್ದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ನಡೆದಿದೆ.

ನವಲಗುಂದ ತಾಲೂಕಿನ ಮೊರಬ ಗ್ರಾಮದ ಶ್ರೀನಿವಾಸ ರೆಡ್ಡಿ ಮಾಸ್ತಿ ಎಂಬಾತ ಖಾಸಗಿ ಬ್ಯಾಂಕ್ ನಲ್ಲಿ 14 ಲಕ್ಷ ಸಾಲವನ್ನು ಮಾಡಿದ್ದ, ತನ್ನ ತಂದೆಯ ಹೆಸರಲ್ಲಿ ಕೂಡಾ 50 ಸಾವಿರ ಬೆಳೆ ಸಾಲವನ್ನು ಮಾಡಿಕೊಂಡಿದ್ದ.
ಮಾಡಿದ ಸಾಲವನ್ನು ತೀರಿಸಲಾಗದೆ ಮಾನಸಿಕವಾಗಿ ನೊಂದುಕೊಂಡು ಮನೆಯಲ್ಲಿದ್ದ ಉಣ್ಣೆ ಪುಡಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ,ಕೂಡಲೇ ಈತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದರು ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.
ಸ್ಥಳಕ್ಕೆ ನವಲಗುಂದ ಠಾಣೆಯ ಪೊಲೀಸರು ಭೇಟಿಯನ್ನು ನೀಡಿ ಶವವನ್ನು ಮರಣೋತ್ತರ ಪರೀಕ್ಷೆ ಮಾಡಿಸಿ, ಸಂಬಂಧಿಕರಿಗೆ ಹಸ್ತಾಂತರಿಸಿದ್ದಲ್ಲದೇ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.