Posts Slider

Karnataka Voice

Latest Kannada News

“ಗೆಸ್ಟ್ ಹೌಸ್”ನ್ನೇ ಮನೆ ಮಾಡಿಕೊಂಡ ಮಹಿಳಾ ಅಧಿಕಾರಿಗೆ ಹೇಳೋರು ಕೇಳೋರು ಇಲ್ವಾ ಇಲಾಖೆಯಲ್ಲಿ…!?

Spread the love

ಧಾರವಾಡ: ನಗರದಲ್ಲಿ ಕಳೆದ 17 ತಿಂಗಳುಗಳಿಂದ ಬೀಡು ಬಿಟ್ಟಿರುವ ಮಹಿಳಾ ಅಧಿಕಾರಿಯೋರ್ವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಅನುಕೂಲವಾಗಬೇಕಿದ್ದ ಗೆಸ್ಟ್ ಹೌಸ್ ನ್ನ ಮನೆ ಮಾಡಿಕೊಂಡಿದ್ದು, ಇವರಿಗೆ ಯಾರೂ ಕೇಳದಿರುವುದಕ್ಕೆ ಕಾರಣವೇನು ಎಂಬುದು ನಿಗೂಢವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಶಬ್ಧ ಮಾಡುವ ಮಹಿಳಾ ಅಧಿಕಾರಿ, ತನಗೆ ಅನ್ನ ಕೊಡುವ ಇಲಾಖೆಯಲ್ಲಿ ಹೇಗೆ ಇರಬೇಕು ಎಂಬುದು ಗೊತ್ತಿಲ್ಲದೇ ಇರುವುದು ದುರಂತವಾಗಿದೆ.

ತಮ್ಮ ಇಲಾಖೆಯ ಅಧಿಕಾರಿಗಳು ಬೇರೆ ಪ್ರದೇಶಗಳಿಂದ ಬಂದರೇ ಅವರಿಗೆ ವಿಶ್ರಾಂತಿ ಪಡೆಯಲು ನಿರ್ಮಾಣ ಮಾಡಿದ್ದ ಗೆಸ್ಟ್ ಹೌಸ್ ಬಹುತೇಕ 17 ತಿಂಗಳುಗಳಿಂದ ಮನೆಯಾಗಿ ಮಾರ್ಪಾಡಾಗಿದೆ. ಧಾರವಾಡದ ಇತಿಹಾಸದಲ್ಲಿ ಇದು ಮೊದಲ ಬಾರಿಯಾಗಿದೆ. ಯಾವುದೇ ಅಧಿಕಾರಿ ಇಷ್ಟೊಂದು ಲಜ್ಜೆಗೆಟ್ಟಿರಲಿಲ್ಲವೆಂದು ಹೇಳಲಾಗುತ್ತಿದೆ.

ಇಂತಹ ಮನಸ್ಥಿತಿಯ ಮಹಿಳಾ ಅಧಿಕಾರಿಗೆ ಪಾಠ ಕಲಿಸುವ ಅಥವಾ ಇಲಾಖೆಯ ಗೌರವ ಕಾಪಾಡುವ ಬಗ್ಗೆಯೂ ಯಾವುದೇ ಹಿರಿಯ ಅಧಿಕಾರಿಗಳು ಹೇಳದೇ ಇರುವುದು ಸೋಜಿಗ ಮೂಡಿಸುತ್ತಿದೆ.

ಖಾಲಿ ಡಬ್ಬದ ಶಬ್ಧಕ್ಕೆ ಬೆದರಿ ಕೂತರಾ.. ಅಥವಾ ಖಾಲಿ ಡಬ್ಬದ ‘….’ ಮೋಸ ಹೋದರಾ.. ಪ್ರಶ್ನೆಯಾಗಿಯೇ ಉಳಿಯುತ್ತಿದೆ.


Spread the love

Leave a Reply

Your email address will not be published. Required fields are marked *