“ರಜತ ಸಂಭ್ರಮ” ಹೊಸ ಸಿನೇಮಾ ಮಾಡಲು ಹೊರಟ್ರಾ ಉಳ್ಳಾಗಡ್ಡಿಮಠ ರಜತ….!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕಾಂಗ್ರೆಸ್ ನಲ್ಲಿ ವಿನೂತನವಾಗಿ ಪಕ್ಷವನ್ನ ಬೆಳೆಸಲು ಮುಂದಾಗಿರುವ ಮುಖಂಡ ರಜತ ಉಳ್ಳಾಗಡ್ಡಿಮಠ, ಇಂದು ಸಾಮಾಜಿಕ ಜಾಲತಾಣದಲ್ಲಿ ಹೊಸದೊಂದು ಪೋಸ್ಟರ್ ಬಿಡುಗಡೆ ಮಾಡಿದ್ದು, ಹಲವು ಕೌತುಕ ಮೂಡಿಸಿದೆ.
ಸದಾಕಾಲ ಯುವಕರು ಹಾಗೂ ಹಿರಿಯರ ನಡುವೆ ಪಕ್ಷ ಸಂಘಟನೆಯಲ್ಲಿ ತೊಡಗಿರುವ ರಜತ ಉಳ್ಳಾಗಡ್ಡಿಮಠ, ಜನಪರ ಕಾಳಜಿಯನ್ನ ಹೊಂದಿದ್ದಾರೆ. ಇಂದು ಬಿಡುಗಡೆ ಮಾಡಿರುವ ಚಿತ್ರವೂ ಅದಕ್ಕೆ ಪೂರಕವಾಗಿಯೇ ಇದ್ದರೂ, ಹೊಸದೊಂದು ಪ್ರಶ್ನೆಯನ್ನ ಹುಟ್ಟು ಹಾಕಿದೆ.

ಪೋಸ್ಟರ್ ನಲ್ಲಿ “ರಜತ ಸಂಭ್ರಮ” ಎಂದು ನಮೂದಿಸುವ ಜೊತೆಗೆ ಇದು ಸೇವೆಯಲ್ಲ ಕರ್ತವ್ಯ ಎಂದು ಕೂಡ ಬರೆಯಲಾಗಿದೆ. ಅಷ್ಟೇ ಅಲ್ಲ, ಐತಿಹಾಸಿಕ ಕ್ಷಣವೊಂದಕ್ಕೆ ಹುಬ್ಬಳ್ಳಿ ಸಾಕ್ಷಿಯಾಗಲಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಕರ್ನಾಟಕವಾಯ್ಸ್.ಕಾಂ ಸಂಪರ್ಕ ಮಾಡಿದ ಸಮಯದಲ್ಲಿಯೂ ಏನು..? ಹೇಗೆ..? ಎಲ್ಲಿ..? ಯಾವಾಗ..? ಎಂಬುದನ್ನ ಹೇಳುತ್ತೇನೆ ಸರ್ ಎಂದು ಮುಗಳ್ನಕ್ಕು ಸುಮ್ಮನಾಗಿದ್ದಾರೆ. ಹಾಗಾಗಿಯೇ, ಅವರು ಚಲನಚಿತ್ರ ಮಾಡಲು ಹೊರಟಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವೂ ಹಲವು.
ರಜತ ಉಳ್ಳಾಗಡ್ಡಿಮಠ ಅವರ ತಂದೆ ವಿಶ್ವಪ್ರಕಾಶ ಉಳ್ಳಾಗಡ್ಡಿಮಠ, ಸಿನೇಮಾ ನಟರ ಕುಟುಂಬದೊಂದಿಗೆ ಆತ್ಮೀಯ ಸಂಬಂಧವನ್ನ ಹೊಂದಿದ್ದರೆಂಬುದನ್ನ ಇಲ್ಲಿ ಸ್ಮರಿಸಬಹುದಾಗಿದೆ.