ನೀರು ತರಲು ಹೋಗಿದ್ದ ಶಿಕ್ಷಕ ಬಾವಿಯಲ್ಲಿ ಬಿದ್ದು ದುರ್ಮರಣ…!

ಕಲಬುರಗಿ: ತಮ್ಮದೇ ಹೊಲದಲ್ಲಿನ ಬಾವಿಯಿಂದ ನೀರು ತರಲು ಹೋಗಿದ್ದ ಶಿಕ್ಷಕನೋರ್ವ ಕಾಲು ಜಾರಿ ಬಿದ್ದು ಸಾವಿಗೀಡಾದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ತೆಲ್ಲೂರ್ ಗ್ರಾಮದಲ್ಲಿ ನಡೆದಿದೆ.

30 ವಯಸ್ಸಿನ ಮಲ್ಲಿಕಾರ್ಜುನ್ ಮಡಿವಾಳ ಎಂಬುವವರೇ ಸಾವಿಗೀಡಾದ ದುರ್ದೈವಿಯಾಗಿದ್ದು, ಶವವನ್ನ ಹೊರಗೆ ತೆಗೆಯಲು ಹರಸಾಹಸ ಪಡಲಾಗುತ್ತಿದೆ.
ಹೊಲದಲ್ಲಿರುವ ಕಡಲೆಗೆ ಕ್ರಿಮಿನಾಶಕ ಔಷಧಿ ಹೊಡೆಯೊದಕ್ಕೆ ನೀರು ತರಲು ಹೋಗಿದ್ದ ಶಿಕ್ಷಕ ಮಲ್ಲಿಕಾರ್ಜುನ್ ಬಾವಿಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಈಜು ಬಾರದ ಹಿನ್ನೆಲೆಯಲ್ಲಿ ಸಾವಿಗೀಡಾಗಿದ್ದಾರೆಂದು ಗೊತ್ತಾಗಿದೆ.
ಪ್ರಕರಣವೂ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಕೂಡಾ ಸ್ಥಳಕ್ಕೆ ಆಗಮಿಸಿ, ಶವದ ಹುಡುಕಾಟದಲ್ಲಿ ತೊಡಗಿದ್ದಾರೆ.