ನಾವೂ ಐಟಂ ಸಾಂಗ್ ಥರಾ.. “ಊ ಅಂಟಾನಾ ಮಾಮಾ ಹೂಊ ಅಂಟಾವಾ” ಆಗೇವಿ: ಬಿಜೆಪಿ ಮಾಜಿ ಸಚಿವ, ಹಾಲಿ ಶಾಸಕ..

ಯಾದಗಿರಿ: ರಾಜಕಾರಣಿಗಳು ತಮ್ಮತನವನ್ನ ಕಳೆದುಕೊಂಡು ಜನರಿಗೆ ಮನೋರಂಜನೆ ಕೊಡುವ ರೀತಿಯಲ್ಲಿ ನಡೆದುಕೊಳ್ಳಲಾಗುತ್ತಿದೆ. ಒಂದು ರೀತಿಯಲ್ಲಿ ಐಟಂ ಸಾಂಗ್ ಥರಾ ಆಗಿದ್ದೇವೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಾಜುಗೌಡ ಅವರು, ಪ್ರತಿಪಕ್ಷ ಹಾಗೂ ಸ್ವ ಪಕ್ಷದವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಯಾದಗಿರಿಯಲ್ಲಿ ಸುರಪೂರ ಶಾಸಕ ರಾಜುಗೌಡ ಹೇಳಿಕೆ ಇಲ್ಲಿದೆ ನೋಡಿ…
ಕೆಲವು ನಾಯಕರು ಹೇಳುವ ಹೇಳಿಕೆಗಳು ತೂಕವಿಲ್ಲರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹತ್ರ 16 ಜನ ಇದ್ದಾರೆ ಅಂತ ಒಬ್ಬರೂ ಹೇಳ್ತಾರೆ. ಇನ್ನೋಬರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಅಂತ ಹೇಳ್ತಾರೆ ಎಂದರು.
ನಮ್ಮಂತವರಿಗೆ ಬೆಲೆ ಇಲ್ಲದಂತಾಗಿದ್ದು, ಯಾರ ಜೊತೆ ಮಾತಾನಾಡದೇ ಇರುವಂತಹ ಪರಿಸ್ಥಿತಿ ಉದ್ಭವವಾಗಿದೆ. ಸಿದ್ದರಾಮಯ್ಯ , ಡಿಕೆಶಿ ನಮ್ಮಲ್ಲಿ ಇಷ್ಟು ಜನ ಸಂಪರ್ಕದಲ್ಲಿದ್ದಾರೆ ಅಂತ ಹೇಳ್ತಾರೆ. ರಮೇಶಣ್ಣ ನಮ್ಮಲ್ಲಿ 16 ಜನ ಇದ್ದಾರೆ ಅಂತ ಹೇಳ್ತಾರೆ. ಕೌಂಟರಗೆ ಕೌಂಟರ ಕೊಡುವುದಾಗಿದೆ ಎಂದು ಬೇಸರವ್ಯಕ್ತಪಡಿಸಿದರು.
ಜಾತ್ರೆ, ಸಂತೆಯಲ್ಲಿ ಹಾವಾಡಿಗರು ಬರ್ತಾರೆ, ಬುಟ್ಟಿಯಲ್ಲಿ ಅಷ್ಟು ದೊಡ್ಡ ಹಾವು ಇದೆ ಇಷ್ಟು ದೊಡ್ಡ ಹಾವು ಇದೆ ಅಂತ ಹೇಳ್ತಾರೆ. ಕೊನೆಗೆ ಹಾವೇ ತೋರಸಲ್ಲ. ಹಂಗ ಪರಿಸ್ಥಿತಿಯಾಗಿದೆ. ಇವರು ಯಾರ ಸಂಪರ್ಕದಲ್ಲಿ ಎಷ್ಟು ಜನ ಇದ್ದಾರೆ ಅಂತ ಹೇಳಲ್ಲ ಎಂದು ಟೀಕಿಸಿದರು.
ರಾಜಕಾರಣಿಗಳು ಒಂದು ಥರಾ ಐಟಂ ಸಾಂಗ್ ಆಗಿ ಬಿಟ್ಟಿವೆ. ಹೂ ಅಂಟವಾ ಮಾಮ್ ! ಹೂಊ ಅಂಟವಾ ! ಥರಾ ಆಗಿ ಬಿಟ್ಟಿವೆ ಎಂದು ವ್ಯಂಗವಾಡಿದರು.