ಮಾಜಿ ಸಿಎಂ ಯಡಿಯೂರಪ್ಪರ ಮೊಮ್ಮಗಳು ನೇಣಿಗೆ ಶರಣು…

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಮೂವತ್ತು ವರ್ಷದ ಸೌಂದರ್ಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.
ಎಂಬಿಬಿಎಸ್ ಓದಿದ್ದ ಸೌಂದರ್ಯ ಅವರು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಮದುವೆಯಾಗಿ ಒಂದು ಮಗು ಕೂಡಾ ಇತ್ತು ಎಂದು ತಿಳಿದು ಬಂದಿದೆ.

ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸೌಂದರ್ಯ ಅವರು ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿಯವರ ಮಗಳು ಎಂದು ತಿಳಿದುಬಂದಿದೆ.
ಬೆಂಗಳೂರಿನ ಶ್ಯಾಂಘ್ರಿಲಾ ಹೊಟೇಲ್ ಬಳಿಯಲ್ಲಿರುವ ಪ್ಲ್ಯಾಟನಲ್ಲಿನ ಮನೆಯಲ್ಲಿನ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗೊತ್ತಾಗಿದೆ.
ವೈದ್ಯಳಾಗಿರುವ ಸೌಂದರ್ಯ ಪತಿ ನೀರಜ್ ಕೂಡಾ ವೈಧ್ಯರಾಗಿದ್ದು, ಅವರು ಮನೆಯಿಂದ ರಾಮಯ್ಯ ಆಸ್ಪತ್ರೆಗೆ ಹೋದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ. ಪತಿ ನೀರಜ್ ಜೊತೆ 2018ರಲ್ಲಿ ಸೌಂದರ್ಯ ಮದುವೆಯಾಗಿತ್ತು.