ಧಾರವಾಡದಲ್ಲಿ “ಬಹುದೊಡ್ಡ ಕಳ್ಳತನ”- ‘ಅದೇ ಠಾಣೆ’ ವ್ಯಾಪ್ತಿಯಲ್ಲೇಕೆ ನಡೆಯಿತು…!?

ಧಾರವಾಡ: ನಗರದ ಬಾರಕೋಟ್ರಿ ರಸ್ತೆಯಲ್ಲಿನ ಕೇಶವನಗರ ಹಾಗೂ ಯಾಲಕ್ಕಿ ಶೆಟ್ಟರ್ ಕಾಲನಿಯ ಚಾಣಕ್ಯನಗರದಲ್ಲಿ ಬೆಚ್ಚಿ ಬೀಳಿಸುವಂತ ಕಳ್ಳತನ ಪ್ರಕರಣಗಳು ಇಂದು ಬೆಳಕಿಗೆ ಬಂದಿವೆ.

ಧವಲ್ ಟಕ್ಕರ ಎಂಬುವವರ ಮನೆಗೆ ಕನ್ನ ಹಾಕಿರುವ ಕಳ್ಳರು ಸುಮಾರು ಒಂದು ಕೆಜಿ ಬಂಗಾರ ಹಾಗೂ ಲಕ್ಷಾಂತರ ರೂಪಾಯಿ ಹಣವನ್ನ ದೋಚಿಕೊಂಡು ಪರಾರಿಯಾಗಿದ್ದಾರೆ. ಬಾರಾಕೋಟ್ರಿಯ ಕೇಶವನಗರದಲ್ಲಿನ ಮನೆ ಇದಾಗಿದೆ.
ಮನೆಗೆ ಬೀಗ ಹಾಕಿ ಊರಿಗೆ ಹೋದಾಗ ಕಳ್ಳತನವಾಗಿದ್ದು, ಯಾವಾಗ ನಡೆದಿದೆ ಗೊತ್ತಾಗಿಲ್ಲ. ಧವಳ ಟಕ್ಕರ್ ಮನೆಗೆ ಬಂದಾಗ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದೆ.

ಧಾರವಾಡದ ಯಾಲಕ್ಕಿ ಶೆಟ್ಟರ ಕಾಲನಿಯ ಅಂಬೇಡ್ಕರ್ ನಗರದಲ್ಲೂ ಕಳ್ಳತನ ಮಾಡಲಾಗಿದೆ. ವಿನಾಯಕ ಪಾಟೀಲ ಅವರ ಮನೆಯಲ್ಲಿನ ಒಂದು ಲಕ್ಷ ರೂಪಾಯಿ ನಗದು ಹಾಗೂ ನಾಲ್ಕು ತೊಲೆ ಬಂಗಾರ ದೋಚಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣವೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನದಳವೂ ಆಗಮಿಸಿದ್ದು, ತನಿಖೆ ನಡೆಯುತ್ತಿದೆ.
ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿರುವುದು ಹಲವು ರೀತಿಯಲ್ಲಿ ಅನುಮಾನ ಮೂಡಿಸುತ್ತಿದೆ.