ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ಸಹೋದರನಿಗೆ “ಡಿಚ್ಚಿ” ಕೊಟ್ಟವರಾರು…!

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಮುಖಂಡನ ಸಹೋದರನಿಗೆ ರಕ್ತ ಬರುವ ಹಾಗೇ ಹೊಡೆಯಲಾಗಿದ್ದು, ಯಾರೂ ಹೊಡೆದರು, ಯಾವ ಕಾರಣಕ್ಕೆ ಹೊಡೆದರು ಎಂಬುದು ಮಾತ್ರ ರಹಸ್ಯವಾಗಿದೆ.
ಮಂಜು ಜಡಿ ಎಂಬುವವರಿಗೆ ಮೂಗಿಗೆ ರಕ್ತ ಬರುವ ಹಾಗೇ ಹೊಡೆಯಲಾಗಿದ್ದು, ಅವರನ್ನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆಯ ಬಗ್ಗೆ ಗಾಯಾಳು ಮಂಜು ಅವರ ಮೊಬೈಲ್ ಸಂಖ್ಯೆಗೆ ಪ್ರಯತ್ನಿಸಿದರೂ ಯಾವುದೇ ಉತ್ತರ ಬಂದಿಲ್ಲ. ಈ ಬಗ್ಗೆ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ಅವರನ್ನ ಸಂಪರ್ಕ ಮಾಡಿದಾಗ, ನನಗೆ ಈ ವಿಷಯ ಗೊತ್ತೆಯಿಲ್ಲ. ಈ ಬಗ್ಗೆ ಈಗ ಕೇಳಿ ಮಾಹಿತಿ ಪಡೆಯುತ್ತೇನೆ’ ಎಂದು ಹೇಳಿದರು.
ಘಟನೆಯ ಬಗ್ಗೆ ಹಲವು ಊಹಾಪೋಹಗಳಿದ್ದು, ಯಾಕೆ ಪ್ರಕರಣವನ್ನ ಮುಚ್ಚಿಡುವ ಪ್ರಯತ್ನ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಘಟನೆಯು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮಾವನೂರ ಗ್ರಾಮದಲ್ಲಿ ನಡೆದಿದೆ ಎಂದು ಹೇಳಲಾಗಿದೆ.