ಭ್ರಷ್ಟ ಮಹಿಳಾ ಅಧಿಕಾರಿಗೆ “ಪ್ರಿನ್ಸ್ ಪ್ರತಾ”ನೇ ‘ತಿಂಗಳ-ಗಿಂಬಳ’ ತಲುಪಿಸೋರಂತೆ….!

ಧಾರವಾಡ: ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನ ತಾವೂ “ಜಗದೇಕವೀರಡೂ-ಅತಿಲೋಕ ಸುಂದರಿ’ಯಂತೆ ಬಿಂಬಿಸಿಕೊಳ್ಳುವ ಮಹಿಳಾ ಅಧಿಕಾರಿ ಭ್ರಷ್ಟತೆಯಲ್ಲೂ ಮೀತಿ ಮೀರಿದ್ದಾರೆ ಎಂಬುದು ಗೊತ್ತಾಗುತ್ತಿದೆ.
ಮೊದಲು ತಮ್ಮದೇ ಕಚೇರಿಯಲ್ಲಿ ತಮ್ಮ ‘ಆಗು-ಹೋಗು’ ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ಹುಬ್ಬಳ್ಳಿಗೆ ವರ್ಗಾವಣೆ ಆಗಿದೆ. ಆದರೂ ಆತನೇ ಈಗಲೂ ತಿಂಗಳ-ಗಿಂಬಳ ತಂದು ಕೈ ಗೀಡುತ್ತಾನೆ. ತನ್ನ ಸಿಬ್ಬಂದಿಯ ಮೇಲಾಧಿಕಾರಿಗೆ ಸೂಚನೆ ನೀಡಿರುವ ಮಹಾನ್ ಮಹಿಳಾ ಅಧಿಕಾರಿ, ‘ಅವನಿಗೊಂದಿಷ್ಟು ರಿಲೀಫ್ ಕೊಡಿ’ ಎಂದು ಹೇಳಿದ್ದಾರಂತೆ.

ಇನ್ನುಳಿದಂತೆ ಸದಕಾಲ ಪೊಲೀಸರ ಡೀಲರ್ ಎಂದೇ ಕರೆಸಿಕೊಳ್ಳುವ ಪ್ರಿನ್ಸ್, ಇಲ್ಲಿಯೂ ತನ್ನ ದಲಾಲಿಗಿರಿಯನ್ನ ಮುಂದುವರೆಸಿದ್ದು, ಭ್ರಷ್ಟ ಮಹಿಳಾ ಅಧಿಕಾರಿಯ ಬಹುತೇಕ ಡೀಲಿಂಗ್ ಗೆ ಈತನೇ ಸಾಥ್ ಕೊಡುತ್ತಿದ್ದಾನೆಂದು ಗೊತ್ತಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವರ್ಚಸ್ಸು ಬಿಂಬಿಸಿಕೊಂಡು ಪತಿಯನ್ನ ತನ್ನ ಕಚೇರಿಯಲ್ಲಿ ಕೂಡಿಸಿಕೊಳ್ಳುತ್ತಿದ್ದ ಮಹಿಳಾ ಅಧಿಕಾರಿ, ಸಧ್ಯಕ್ಕೆ ಪತಿಯನ್ನ ಬರದಂತೆ ನೋಡಿಕೊಳ್ಳುತ್ತಿದ್ದು, ಡೀಲಿಂಗ್ ಮಾತ್ರ ನಿರಂತರವಾಗಿದೆ ಎಂದು ಹೇಳಲಾಗುತ್ತಿದೆ.