ಕುಂದಗೋಳದಲ್ಲಿ ಯಾರೂ ಎಂಎಲ್ಎ: ಮೈದುನನೇ ಬಾಸ್… ಅಧಿಕಾರದಲ್ಲಿ ‘ದರ್ಪದ ಧಮಕಿ’…!

ಕುಂದಗೋಳ: ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರು ಏಕ ಪಕ್ಷೀಯ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹಾಲಿ ಶಾಸಕರ ಮೈದುನ, ಗ್ರಾಮ ಪಂಚಾಯತಿ ಸದಸ್ಯರೋರ್ವರಿಗೆ ಮನಬಂದಂತೆ ಮಾತನಾಡಿರುವ ಆಡೀಯೊಂದು ವೈರಲ್ ಆಗಿದೆ.
ಗ್ರಾಮ ಪಂಚಾಯತಿ ಸದಸ್ಯ ರವಿ ಕುಂಬಾರ ಎಂಬುವವರಿಗೆ ಮೊಬೈಲ್ ಮೂಲಕ ಮಾತನಾಡಿರುವ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿಯವರ ಮೈದುನ ಷಣ್ಮುಖ ಶಿವಳ್ಳಿ, ತಾವೇ ಬಂದು ಪಂಚಾಯತಿಗೆ ಕೂಡುತ್ತೇವೆ ಎಂದು ಹೇಳುವ ಮೂಲಕ ಅಧಿಕಾರದ ದರ್ಪವನ್ನ ತೋರಿಸಲಾಗಿರುವ ಆಡೀಯೊಂದು ಇಲ್ಲಿದೆ ಕೇಳಿ..
ಶಾಸಕಿಯ ಮೈದುನ ಎಂದಾಕ್ಷಣ ಹೀಗೆ ವರ್ತನೆ ಮಾಡುವುದು ಎಷ್ಟು ಸರಿ ಎಂಬುದನ್ನ ಮಿಸ್ಟರ್ ಷಣ್ಮುಖ ಶಿವಳ್ಳಿಯವರು ಅರ್ಥ ಮಾಡಿಕೊಳ್ಳಬೇಕಿದೆ ಎನ್ನೋದು ಪ್ರಜ್ಞಾವಂತರ ಅಂಬೋಣವಾಗಿದೆ.